"ಸಕ್ರಿಯ ಕಾರ್ಯಕರ್ತರ ತಂಡದೊಂದಿಗೆ ಹಿರಿಯರ ಮಾರ್ಗದರ್ಶನದಡಿಯಲ್ಲಿ ಪಕ್ಷವನ್ನು ಸಂಘಟಿಸುವುದು ನನ್ನ ಗುರಿ"-ಕಾರ್ಕಳ ಬ್ಲಾಕ್ ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ಸದಾಶಿವ ದೇವಾಡಿಗ

ಕಾರ್ಕಳ:ಪಕ್ಷದ ನಿರ್ಧಿಷ್ಟ ಧ್ಯೇಯೋದ್ಧೇಶದ ಅನುಷ್ಠಾನದ ಬಧ್ದತೆ ಹೊಂದಿರುವ ಸಕ್ರಿಯ ಕಾರ್ಯಕರ್ತರ ತಂಡದೊಂದಿಗೆ   ಹಿರಿಯರ ಮಾರ್ಗದರ್ಶನದಡಿಯಲ್ಲಿ ಪಕ್ಷವನ್ನು ಸಂಘಟಿಸುವುದು ನನ್ನ ಗುರಿಯಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ಸಿನ ನೂತನ ಅಧ್ಯಕ್ಷ  ಸದಾಶಿವ ದೇವಾಡಿಗ ಹೇಳಿದರು.

ಅವರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಬ್ಲಾಕ್ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಪಕ್ಷದ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಕೆಪಿಸಿಸಿ ಮಾರ್ಗಸೂಚಿ ನಿಯಮದಂತೆ ಚುನಾವಣೆಯನ್ನುಮ ಎದುರಿಸ ಬೇಕಿದೆ ಎಂದು ಅವರು ತಮ್ಮ ತಿಳಿಸಿದ್ದಾರೆ.

ಹೆಬ್ರಿ ಬ್ಲಾಕ್ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತಾಡಿ ಕ್ಷೇತ್ರದಲ್ಲಿ ಸರಕಾರದ ಅಭಿವೃದ್ದಿ ಯೋಜನೆಗಳು ಜನರ ಅನುಕೂಲಕ್ಕಾಗಿ ಅನುಷ್ಠಾನಗೊಳ್ಳದೆ ವೈಯಕ್ತಿಕ ಹಿತಾಸಕ್ತಿಯ ಮೇಲೆ ಅನುಷ್ಠಾನಗೊಳ್ಳುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ನೀರೆ ಕೃಷ್ಣ ಶೆಟ್ಟಿ, ಕೃಷಿ ಘಟಕ ರಾಜ್ಯ ಕಾರ್ಯದರ್ಶಿ ಉದಯ  ಶೆಟ್ಟಿ, ಹಿಂದುಳಿದ ವರ್ಗದ ಅಧ್ಯಕ್ಷ ಕುಶ ಮೂಲ್ಯ,ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ವಿವೇಕಾನಂದ ಶೆಣೈ, ನಗರ ಮಹಿಳಾಧ್ಯಕ್ಷೆ ನಳಿನಿ ಆಚಾರ್ಯ ಸಂದರ್ಭೋಚಿತ ಮಾತಾಡಿ ಸಲಹೆ ಸೂಚನೆ ನೀಡಿದರು.

ಮಾಜಿ ಕೆಪಿಸಿಸಿ ಸದಸ್ಯ ಕೃಷ್ಣ ಮೂರ್ತಿ,     ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ರವಿಶಂಕರ್, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್,  ಬ್ಲಾಕ್  ಉಪಾಧ್ಯಕ್ಷ ದಯಾನಂದ ಬಂಗೇರ, ಅಲ್ಪ ಸಂಖ್ಯಾತ ಘಟಕದ ಆರೀಪ್ ಕಲ್ಲೊಟ್ಟೆ, ಎಸ್ಸಿ ಘಟಕ ಅಧ್ಯಕ್ಷ ಅಣ್ಣಪ್ಪ ನಕ್ರೆ, ಐಟಿ ಅಧ್ಯಕ್ಷ ಸತೀಶ ಕಾರ್ಕಳ,ನವೀನ್ ದೇವಾಡಿಗ, ಪುರಸಭಾ ಸದಸ್ಯ ಸೀತಾರಮ್ ದೇವಾಡಿಗ  ನಗರ ಮಹಿಳಾಧ್ಯಕ್ಷೆ ಕಾಂತಿಶೆಟ್ಟಿ, ಕಾರ್ಯದರ್ಶಿ ಶೋಭ, ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪ್ರಸ್ತಾವನೆ ಗೈದರು. ಪ್ರಧಾನ ಕಾರ್ಯದರ್ಶಿಗಳಾದ ಪ್ರಭಾಕರ ಬಂಗೇರ ಸ್ವಾಗತಿಸಿದರು, ಜೋಜ್೯ ಕ್ಯಾಸ್ತಲಿನೋ ವಂದನಾರ್ಪಣೆ ಗೈದರು.ಸೇವಾದಳದ ಅಧ್ಯಕ್ಷ ಸುಶಾಂತ್ ಕಾರ್ಯಕ್ರಮ ನಿರ್ವಹಿಸಿದರು.


ಜಾಹೀರಾತು




https://www.timesofkarkala.in/2020/10/blog-post_8.html












Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget