ಹೆಬ್ರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆ-Times Of Karkala

ಹೆಬ್ರಿ, ಅ.22 : ಬಿಜೆಪಿ ದೊಡ್ಡವರ ಪಕ್ಷ .ಬಿಜೆಪಿ ಬಡವರ ಪಕ್ಷ ಅಲ್ಲ, ಬಿಜೆಪಿ ಬಡವರಿಗಾಗಿ ಏನೂ ಮಾಡಿಲ್ಲ, ಇನ್ನೂ ಏನೂ ಮಾಡಲ್ಲ. ಅದು ಸ್ಥಿತಿವಂತರ, ಮೇಲ್ವರ್ಗದವರ ಪಕ್ಷ, ಬಡವರನ್ನು ಕೆರಳಿಸಿ ಕೆಲಸ ಮಾಡಿಸಿಕೊಂಡು ಅರ್ಧದಲ್ಲಿ ಕೈಬಿಡುತ್ತದೆ ಎಂದು ಎಐಸಿಸಿ ಸದಸ್ಯರಾದ ಕಾಂಗ್ರೆಸ್‌ ತರಬೇತಿ ಅಕಾಡೆಮಿಯ ಸಂಚಾಲಕ ಪಿ.ವಿ.ಮೋಹನ್‌ ಹೇಳಿದರು.


ಅವರು  ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘದ ಸಭಾಂಗಣದಲ್ಲಿ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಬುಧವಾರ ನಡೆದ ಕಾಂಗ್ರೆಸ್‌ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕರ್ತರು ಮತ್ತು ನಾಯಕರು ಒಂದಾಗಿ ಕಾಂಗ್ರೆಸ್‌ ಪಕ್ಷವನ್ನು ಮತ್ತೇ ಹಳ್ಳಿಯಿಂದಲೇ ಸಂಘಟಿಸಿ ಬಲಪಡಿಸಬೇಕು, ನಿಮ್ಮ ಕಾಂಗ್ರೆಸ್‌ಗಾಗಿ ನೀವೆ ಬದಲಾವಣೆಯ ಪಾಲುದಾರರಾಗಿ ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ವೈಭವವನ್ನು ಮತ್ತೆ ಸ್ಥಾಪಿಸಿ ಎಂದು ಪಿ.ವಿ.ಮೋಹನ್‌ ಹೇಳಿದರು.
ಕಾಂಗ್ರೆಸ್‌ ಜನರ ಬದುಕಿನ ಒಂದು, ಅಂದಿನಿಂದ ಇಂದಿನ ತನಕ ಕಾಂಗ್ರೆಸ್‌ ಜನರಿಗೆ ಎಲ್ಲರೊಂದಿಗೆ ಬದುಕು ನೀಡಿದೆ, ಅಂತಹ ಕಾಂಗ್ರೆಸ್‌ ಪಕ್ಷಕ್ಕೆ ಸಾಮೂಹಿಕ ನಾಯಕತ್ವದಿಂದ ಈಗ ಬಲ ತುಂಬಬೇಕಿದೆ, ಡಿಕೆಶಿ ಸಾರಥ್ಯದಿಂದ ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ. ನಮ್ಮೆಲ್ಲರ ಶಕ್ತಿಯನ್ನು ಪಕ್ಷಕ್ಕಾಗಿ ತ್ಯಾಗ ಮಾಡಬೇಕಿದೆ ಆಗ ಮಾತ್ರ ಪಕ್ಷದ ಉನ್ನತಮಟ್ಟದಲ್ಲಿ ಬೆಳೆಯಲಿದೆ. ಮುಂದೆ ಕಾಂಗ್ರೆಸ್‌ನಿಂದ ಕ್ರಾಂತಿ ನಡೆಯಲಿದೆ ಎಂದು ಪಿ.ವಿ.ಮೋಹನ್‌ ಕಾರ್ಯಕರ್ತರಿಗೆ ಭರವಸೆ ನೀಡಿದರು.

ಕಾರ್ಕಳದಲ್ಲಿ ಕಾಂಗ್ರೆಸ್‌ ಪ್ರಬಲವಾಗಿದೆ : ಶಾಹಿಕ್‌ ಖಾದರ್

ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಪ್ರಬಲವಾಗಿ ಶ್ರೇಷ್ಠರಾದ ಉತ್ಸಾಹಿ ಕಾರ್ಯಕರ್ತರ ಮೂಲಕ ಪಕ್ಷ ಇನ್ನಷ್ಟು ಗಟ್ಟಿಯಾಗಿ ಹಿಂದಿನ ವೈಭವ ಮತ್ತೇ ಮರುಕಳಿಸಲಿದೆ ಎಂದು ಕೆಪಿಸಿಸಿ ವೀಕ್ಷಕರಾದ  ಖಾದರ್‌ ಮೋಯಿದ್ದಿನ್ ಶಾಹೀಕ್ ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಕುಮಾರ್‌ ಕೊಡವೂರು ಮಾತನಾಡಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್‌ ಕಟ್ಟೋಣ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಪಕ್ಷ ಸಂಘಟನೆಗೆ ಎಲ್ಲರೂ ಒಮ್ಮತದ ಮೂಲಕ ಕೈಜೋಡಿಸಿ ಎಂದು ಮನವಿ ಮಾಡಿ ಬಿಜೆಪಿಗೆ ಜನರ ಕಾಳಜಿ ಇಲ್ಲ, ಕೊರೊನಾ ಸಂಕಷ್ಟದಲ್ಲೂ ಜನರ ಪರವಾಗಿ ನಿಂತಿಲ್ಲ, ಅವರಿಗೆ ಹಣ ಲೂಟಿ ಮಾಡುವುದು ಒಂದೇ ಕೆಲಸ, ಜನತೆಗೆ ಕನಿಷ್ಠ 5 ರೂಪಾಯಿಯ ಮಾಸ್ಕ್‌ ನೀಡುವ ಯೋಗ್ಯತೆ ಕೂಡ ಇಲ್ಲ ಎಂದರು.
ಕೆಪಿಸಿಸಿಯ ವೀಕ್ಷಕರಾದ ಗದಗದ ಮಹಾಬಲೇಶ್ವರ್‌, ಭಟ್ಕಳದ ಉಸ್ನಾ ಜಾವೇದ್‌, ಬೆಂಗಳೂರಿನ ಚಂದ್ರಶೇಖರ್‌, ಶಾಹಿಕ್‌ ಖಾದರ್‌ ಅವರನ್ನು ಗೌರವಿಸಲಾಯಿತು.
ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವೈ.ಸುಕುಮಾರ್‌, ರಾಘವ ದೇವಾಡಿಗ, ಯುವ ನಾಯಕ ಎಚ್.ಪ್ರದೀಪ್‌ ಭಂಡಾರಿ, ಕಬ್ಬಿನಾಲೆ ಚಂದ್ರಶೇಖರ ಬಾಯರಿ, ವಿವಿಧ ಘಟಕಗಳ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ಧನ್‌ ಸ್ವಾಗತಿಸಿ ಚೈತ್ರ ಕಬ್ಬಿನಾಲೆ ಕಾರ್ಯಕ್ರಮ  ನಿರೂಪಿಸಿದರು.

ಜಾಹೀರಾತು
https://www.timesofkarkala.in/2020/10/blog-post_8.html


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget