ಹೆಬ್ರಿ:ಹತ್ತು ವರ್ಷಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿ ಅನಾರೋಗ್ಯದಿಂದ ಮನೆಯಲ್ಲಿಯೇ ಸಾವು-Times of karkala

ಹೆಬ್ರಿ:ಸುಮಾರು ಹತ್ತು ವರ್ಷಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಹೆಬ್ರಿ ತಾಲೂಕು, ಮುದ್ರಾಡಿ ಗ್ರಾಮದ ನಿವಾಸಿ  ಭರತ್ ಶೆಟ್ಟಿ(58) ಎಂಬುವವರು ಮುದ್ರಾಡಿ ಪೇಟೆಯಲ್ಲಿರುವ ಅವರ ಮನೆಯಲ್ಲಿ ಅ. 11 ರಂದು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದ್ದು,ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಪೊಲೀಸ್ ವರದಿ:ಹೆಬ್ರಿ: ಭರತ್ ಶೆಟ್ಟಿ, ಪ್ರಾಯ 58 ವರ್ಷ, ರವರು  ಹೆಬ್ರಿ ತಾಲೂಕು, ಮುದ್ರಾಡಿ ಗ್ರಾಮದ ಮುದ್ರಾಡಿ ಪೇಟೆಯಲ್ಲಿರುವ ಅವರ ಮನೆಯಲ್ಲಿ ಸುಮಾರು 10 ವರ್ಷದಿಂದ ಒಬ್ಬಂಟಿಯಾಗಿ ವಾಸ ಮಾಡಿಕೊಂಡಿದ್ದು. ಇತ್ತೀಚಿನ ದಿನಗಳಲ್ಲಿ ಭರತ್ ಶೆಟ್ಟಿಯವರು ಅನಾರೋಗ್ಯದಿಂದ ಬಳಲುತ್ತಿದ್ದು, ದಿನಾಂಕ: 11.10.2020 ರಂದು ಸಂಜೆ 7.00 ಗಂಟೆಯಿಂದ ದಿನಾಂಕ: 12.10.2020 ರಂದು ಬೆಳಿಗ್ಗೆ 6.30 ಗಂಟೆಯ ಮಧ್ಯಾವಧಿಯಲ್ಲಿ ಅನಾರೋಗ್ಯದಿಂದ  ಮನೆಯಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 21/2020 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


ಜಾಹೀರಾತು




https://www.timesofkarkala.in/2020/10/blog-post_8.html












Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget