ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಮೂರ್ತೆದಾರ!-Times of karkala

ಬಂಟ್ವಾಳ: ಶೇಂದಿ ತೆಗೆಯಲು ಹೋದ ವ್ಯಕ್ತಿಯೋರ್ವರು ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಬಂಟ್ವಾಳ ಠಾಣಾ ವ್ಯಾಪ್ತಿಯ ಕಾರ್ಪೆ ಎಂಬಲ್ಲಿ ಸೋಮವಾರ ನಡೆದಿದೆ.ಮೃತಪಟ್ಟ ವ್ಯಕ್ತಿಯನ್ನು ಕಾರ್ಪೆ ನಿವಾಸಿ ನಾರಾಯಣ ಪೂಜಾರಿ (50) ಎಂದು ಗುರುತಿಸಲಾಗಿದೆ.

ಮೂರ್ತೆದಾರರಾಗಿ ಆಗಿ ಕೆಲಸ ಮಾಡುತ್ತಿದ್ದ ಅವರು, ಎಂದಿನಂತೆ ನಿನ್ನೆ ಕೆಲಸಕಾಗಿ ಮನೆಯಿಂದ ಹೊರಟಿದ್ದವರು ರಾತ್ರಿಯಾದರೂ ಮನೆಗೆ ಹಿಂದಿರುಗದ ಕಾರಣ ಅವರ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಅವರನ್ನು ಹುಡುಕಲು ಹೋಗಿದ್ದು, ಮೂರ್ತೆ ಮಾಡುವ ಮರದ ಕೆಳಗೆ ಅವರ ಮೃತ ದೇಹ ಪತ್ತೆಯಾಗಿದೆ.

ನಾರಾಯಣ ಪೂಜಾರಿ ಅವರ ಸಾವಿನ ಬಗ್ಗೆ ಸ್ಥಳೀಯರಲ್ಲಿ ಸಾಕಷ್ಟು ಸಂಶಯಗಳು ಮೂಡುತ್ತಿದ್ದು, ಶೇಂದಿ ತೆಗೆಯಲು ಹೋದವರು ತಾಳೆ ಮರದಿಂದ ಬಿದ್ದು ಮೃತ ಪಟ್ಟಿದ್ದಾರೆಯೇ  ಅಥವಾ ಇವರನ್ನು ಕೊಲೆ ಮಾಡಿದ್ದಾರೆಯೇ ಎಂಬುದು ಪೊಲೀಸ್ ತನಿಖೆಯ ನಂತರ ತಿಳಿಯಬೇಕಿದೆ.,

ಪೂಜಾರಿ ಸಾವಿನ ಬಗ್ಗೆ ಈಗಾಗಲೇ ವದಂತಿಗಳು ಹಬ್ಬುತ್ತಿವೆ. ಬಂಟ್ವಾಳ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಡಿ.ನಗರಾಜ್, ಬಂಟ್ವಾಳ ಗ್ರಾಮೀಣ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಸೇರಿದಂತೆ ಇತರರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.


ಜಾಹೀರಾತು




https://www.timesofkarkala.in/2020/10/blog-post_8.html













Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget