ಈದು:ಸರಕಾರಿ ಜಾಗದ ತಗಾದೆ:ಜೀವ ಬೆದರಿಕೆ-Times Of Karkala

 ಕಾರ್ಕಳ,ಅ.29: ಸರಕಾರಿ ಜಾಗದ   ವಿಚಾರಕ್ಕೆ  ಸಂಬಂಧಿಸಿ ರತ್ನವರ್ಮ ಜೈನ ನೆಲ್ಲಿಕಾರು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಈದು ಜನತಾ ಕಾಲನಿ ನಿವಾಸಿ ಚಂದ್ರಾವತಿ(60) ಎಂಬುವವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 27 ರಂದು ದೂರು ನೀಡಿರುತ್ತಾರೆ. 


ಮಕ್ಕಳು, ಸೊಸೆಯಂದಿರು ಹಾಗೂ ನೆರೆಕರೆಯವರೊಂದಿಗೆ ತಮ್ಮ ಮನೆಯ ಜಗಲಿಯಲ್ಲಿ ಕುಳಿತು ಮಾತನಾಡುತ್ತಿರುವಾಗ ಅವಾಚ್ಯ ಶಬ್ದಗಳಿಂದ ಬೈದು ತಮ್ಮ ಜಗದಲ್ಲಿ ತೆಂಗಿನಕಾಯಿ ಕೊಯ್ಯುತ್ತೀಯ ಎಂದು ರತ್ನವರ್ಮ ಜೈನ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. 

ಮಗ ಪ್ರಕಾಶ್ ಪೂಜಾರಿಗೂ ಕೈಯಿಂದ ಹಲ್ಲೆ ಮಾಡಿ ಇನ್ನು ಮುಂದೆ ನನ್ನ ಸರಕಾರಿ ಜಾಗಕ್ಕೆ ಬಂದರೆ ಕಾಲು ಕಡಿದು ಹಾಕುತ್ತೇನೆ ಎಂದು ಜೀವ  ಬೆದರಿಕೆ ಒಡ್ಡಿರುವುದಾಗಿ  ದೂರಿನಲ್ಲಿ ತಿಳಿಸಿದ್ದಾರೆ. 

ಪೊಲೀಸ್ ವರದಿ

ಕಾರ್ಕಳ: ಪಿರ್ಯಾದುದಾರರಾದ ಶ್ರೀಮತಿ ಚಂದ್ರಾವತಿ (60), ತಂದೆ: ದಿ: ಸುಂದರ ಪೂಜಾರಿ, ವಾಸ: ಜನತಾ ಕಾಲೋನಿ, ಕೇಶವ ನಗರ, ಹೊಸ್ಮಾರ್ ಅಂಚೆ ಈದು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಹಾಗೂ ಆರೋಪಿತ ರತ್ನವರ್ಮ ಜೈನ್ ನೆಲ್ಲಿಕಾರು ಇವರಿಗೂ ಪಿರ್ಯಾದುದಾರರ ಮನೆಯ ಬಳಿ ಇರುವ ಸರಕಾರಿ ಜಾಗದ ವಿಚಾರದಲ್ಲಿ ತಕರಾರು ಇದ್ದು ಇದೇ ವಿಚಾರದಲ್ಲಿ ಆರೋಪಿತನು ಆಗಾಗ ಪಿರ್ಯಾದಿದಾರರ ಹಾಗೂ ಅವರ ಮನೆಯವರ ವಿರುದ್ದ ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣೆಗೆ ಸುಳ್ಳು ದೂರು ಅರ್ಜಿಯನ್ನು ನೀಡುತ್ತಿದ್ದು, ದಿನಾಂಕ 27/10/2020 ರಂದು 19:00 ಗಂಟೆ ಸಮಯಕ್ಕೆ ಪಿರ್ಯಾದುದಾರರು ತನ್ನ ಮಕ್ಕಳು ಹಾಗೂ ಸೊಸೆಯೊಂದಿರು ಮತ್ತು ನೆರೆಕೆರೆಯವರೊಂದಿಗೆ ತಮ್ಮ ಮನೆಯ ಜಗಲಿಯಲ್ಲಿ ಕುಳಿತು ಮಾತನಾಡುತ್ತಿದ್ದಾಗ ಆರೋಪಿತನು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು ಹಲ್ಲೆ ಮಾಡಿದ್ದು  ತಪ್ಪಿಸಲು ಬಂದ ಪಿರ್ಯಾದಿದಾರರ ಮಗ ಪ್ರಕಾಶ್ ಪೂಜಾರಿ ಯವರಿಗೆ ಕೈಯಿಂದ ಹಲ್ಲೆ ಮಾಡಿ  ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2020 ಕಲಂ:, 447, 504, 354, 323, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.



ಜಾಹೀರಾತು



https://www.timesofkarkala.in/2020/10/blog-post_8.html

















Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget