ಸಾಣೂರು:ಯುವಕ ಮಂಡಲ ಸಾಣೂರು ಇದರ ನೇತೃತ್ವದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ -Times Of Karkala

 ಕಾರ್ಕಳ,ಅ,4: ಯುವಕ ಮಂಡಲ, ಸಾಣೂರು ಇದರ  ನೇತೃತ್ವದಲ್ಲಿ ನೆಹರು ಯುವ ಕೇಂದ್ರ ಉಡುಪಿ,  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಣೂರು, ಶ್ರೀವಾಣಿ,  ಪ್ರಸಾದ್,  ಕಾಂತೇಶ್ವರ,  ಆದಿಶಕ್ತಿ,  ಭ್ರಾಮರಿ,  ಮಂಜುಶ್ರೀ ಸ್ವಸಹಾಯ ಸಂಘಗಳು,   ಪರಿಸರ ರಕ್ಷಣಾ ಸಮಿತಿ ಸಾಣೂರು,  ರಿಕ್ಷಾ ಚಾಲಕ ಮಾಲಕರ ಸಂಘ ಸಾಣೂರು  
ಇವುಗಳ ಸಹಯೋಗದೊಂದಿಗೆ ಅಕ್ಟೋಬರ್ 2 ರಂದು ಗಾಂಧೀ  ಜಯಂತಿ ಪ್ರಯುಕ್ತ 'ಗಾಂಧೀಜಿ ನೆನೆಯೋಣ ಸ್ವಚ್ಛ ಕಾರ್ಕಳ ಮಾಡೋಣ' ಅಭಿಯಾನದಡಿ ಸಾಣೂರು ಬೀಜ ಉತ್ಪಾದನಾ ಕೇಂದ್ರದಿಂದ ಸಾಣೂರು ಪೆಟ್ರೋಲ್ ಪಂಪ್ ವರೆಗೆ    ಸ್ವಚ್ಛ ಸಾಣೂರು ಸ್ವಚ್ಛ ಕಾರ್ಕಳ ಬೃಹತ್ ಸ್ವಚ್ಚತಾ ಅಭಿಯಾನ ನಡೆಸಲಾಯಿತು. 


ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಸರ್ಕಾರದ ಮುಖ್ಯ ಸಚೇತಕರು ಆದ ಶ್ರೀ ವಿ  ಸುನಿಲ್ ಕುಮಾರ್ ಆಗಮಿಸಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರಿಗೂ  ಕೃತಜ್ಞತೆ ಸಲ್ಲಿಸಿ ಉತ್ಸಾಹ  ತುಂಬಿದರು. ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಮಾಜಿ ಅಧ್ಯಕ್ಷರಾದ  ಪ್ರವೀಣ್ ಶೆಟ್ಟಿ, ದೇವಾನಂದ್ ಶೆಟ್ಟಿ, ಜಗದೀಶ್ ಕುಮಾರ್ ,ಶಂಕರ್ ಶೆಟ್ಟಿ, ಪ್ರಕಾಶ್ ಮಡಿವಾಳ, ಕಾರ್ಯದರ್ಶಿ ಮೋಹನ್ ಶೆಟ್ಟಿ ,ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಪದಾಧಿಕಾರಿಗಳಾದ 
ಪ್ರಕಾಶ್ ರಾವ್, ರಾಜೇಶ್ ,ಹರೀಶ್, ಪ್ರಸನ್ನ, ಪ್ರಮಿತ್, ಅನಿಲ್ ,ಸುಮುಖ, ಜೀವನ್, ಸಮಿತ್, ಶರತ್, ದಿಲೀಪ್, ಉದಯ ಸಾಕ್ಷತ್, ಜಗನ್ನಾಥ್, ಪರಿಸರ ಸಂರಕ್ಷಣಾ ಸಮಿತಿಯ ಸತ್ಯಾರ್ಥಿ, ಪುರುಷೋತ್ತಮ್ ,ಲಾರೆನ್ಸ್‌, ಶಾಂತಾರಾಮ್ ,ಭವಿಶ್, ಗ್ರಾಮಾಭಿವೃಧ್ದಿ ಯೋಜನೆಯ ಪುಷ್ಪಲತಾ ರಾವ್, ಮಹಿಳಾ ಸದಸ್ಯೆಯರು ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು,      ಪದ್ಮನಾಭ ನಗರ ಪರಿಸರದ ನಿವಾಸಿಗಳು ಸ್ವಚ್ಛತಾ ಅಭಿಯಾನದಲ್ಲಿ  ಪಾಲ್ಗೊಂಡಿದ್ದರು.


  

ಜಾಹೀರಾತು

https://www.timesofkarkala.in/2020/10/blog-post_8.html

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget