ಕಾರ್ಕಳ,ಅ.13: ಕಾರ್ಕಳ ತಾಲೂಕು ದೈವಾರಾಧಕರ ಸಂಘ ಇದರ ಸಾಣೂರು ವಲಯದ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಸಾಣೂರು ದೆಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ಭಾನುವಾರ (11 /10/2020)ದಂದು ಬೆಳಿಗ್ಗೆ 11ಗಂಟೆಗೆ ನಡೆಯಿತು.
ತಾಲೂಕು ದೈವಾರಾಧಕರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ , ನಿಮ್ಮೆಲ್ಲರ ಸಹಕಾರ ದಿಂದ ಸಂಘಟನೆ ಬಲಗೊಳ್ಳಲು ಸಾಧ್ಯ ಎಂದರು. ಉದ್ಘಾಟನ ಭಾಷಣ ಮಾಡಿದ ವೇದ ಮೂರ್ತಿ ಶ್ರೀ ರಾಮ್ ಭಟ್ ಅವರು ಒಳ್ಳೆಯ ಕೆಲಸಕ್ಕೆ ಭಗವಂತನಾ ಅನುಗ್ರಹ ಸದಾ ಇದೆ. ನಿಮ್ಮ ಎಲ್ಲಾ ಒಳ್ಳೆಯ ಕೆಲಸಗಳಿಗೆ ನನ್ನ ಸದಾ ಸಹಕಾರ ಇದೆ ಎಂದರು. ಜೊತೆ ಕಾರ್ಯದರ್ಶಿ ಶಶಿಧರ್ ಕುಲಾಲ್ ಪ್ರಸ್ತಾವಿಕ ವಾಗಿ ಮಾತನಾಡಿದರು. ಪ್ರದಾನ ಕಾರ್ಯದರ್ಶಿ ಸದಾನಂದ ಸಾಲಿಯಾನ್ , ಸಂಘ ನಡೆದು ಬಂದ ದಾರಿ ಬಗ್ಗೆ ಮಾತನಾಡಿದರು. ಸಾಣೂರು ವಲಯದ ೫ ಮಂದಿ ನಿವೃತ್ತ ದೈವಾರಾಧಕಾರರಿ ಗೆ ಸನ್ಮಾನ ಮಾಡಲಾಯಿತು. ವಲಯದ ಅಧ್ಯಕ್ಷ ಗೋಪಾಲ ಪೂಜಾರಿ ಸ್ವಾಗತ ಮಾಡಿದರು. ಕಾರ್ಕಳ ತಾಲೂಕು ಕೋಶಾಧಿಕಾರಿ ಸುಧೀರ್ ಪೂಜಾರಿ ಮತ್ತು ಸಾಣೂರು ವಲಯದ ಪ್ರದಾನ ಕಾರ್ಯದರ್ಶಿ ಸತೀಶ್ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಮಹೇಶ್ ಶೆಟ್ಟಿ ಸಾಣೂರು ಧನ್ಯವಾದ ಅರ್ಪಿಸಿದರು. ತಾಲೂಕು ಪದಾಧಿಕಾರಿಗಳಾದ ಸಚಿನ್ ಮಡಿವಾಳ, ಯತಿನ್ ಶೆಟ್ಟಿ, ಪವನ್ ಮಡಿವಾಳ, ಉಗ್ಗಪ್ಪ ಪರವ ಮತ್ತು ಬಜಗೋಳಿ ವಲಯದ ಅಧ್ಯಕ್ಷ ವಾಸು ಪಾಣಾರ, ಬಜಗೋಳಿ ವಲಯದ ಪದಾಧಿಕಾರಿ ರಾಜು ಪರವ , ನಾರಾಯಣಪಾಣಾರ ಮುಡಾರು, ಶೇಖರ ಪಾಣಾರ ಮಿಯಾರು, ರಾಜು ಪಾಣಾರ ಕೆರ್ವಾಶೆ ಮತ್ತು ದೊಂಡೇರಂಗಡಿ ಮತ್ತು ಬಜಗೋಳಿ ಮತ್ತು ಸಾಣೂರು ವಲಯದ ಸಮಸ್ತ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾಣೂರು ವಲಯದ ಗೌರವ ಅಧ್ಯಕ್ಷರು ಆಗಿ ವೇದ ಮೂರ್ತಿ ಶ್ರೀ ರಾಮ್ ಭಟ್ ಸಾಣೂರು, ಅಧ್ಯಕ್ಷರಾಗಿ ಗೋಪಾಲ ಪೂಜಾರಿ ಇರ್ವತ್ತೂ ರು, ಉಪ ಅಧ್ಯಕ್ಷರು ಆಗಿ ಬೊಗ್ಗು ಪಾಣಾರ ಬಾರಾಡಿ ಮತ್ತು ಸಂತೋಷ ದೇವಾಡಿಗ ಮತ್ತು ವಲಯದ ಪ್ರದಾನ ಕಾರ್ಯದರ್ಶಿ ಯಾಗಿ ಸತೀಶ್ ಮಡಿವಾಳ ಇರ್ವತ್ತೂರು, ಜೊತೆ ಕಾರ್ಯದರ್ಶಿ ಯಾಗಿ ಶಂಕರ್ ಮಡಿವಾಳ ರೆಂಜಾಳ ಹಾಗು ಸಾಣೂರು ವಲಯದ ಸಮಸ್ತ ಗುತ್ತು ಬರ್ಕೆ ಯವರನ್ನು ಗೌರವ ಸಲಹೆ ಗಾರರನ್ನಾಗಿ ಆಯ್ಕೆ ಮಾಡಲಾಯಿತು. ಸಾಣೂರು ವಲಯದ 5ಗ್ರಾಮಗಳ ಕೆಲವು ಪ್ರಮುಖ ದೈವಾರಾಧಕರನ್ನು ಪದಾಧಿಕಾರಿಗಳು ಆಗಿ ನೇಮಿಸಲಾಯಿತು. ಸುಮಾರು 150ಕ್ಕೂ ಮಿಕ್ಕಿ ಸಾಣೂರು ವಲಯದ ದೈವಾರಾಧಕರು ಭಾಗವಹಿಸಿದರು.
Post a comment