ಪಡುಬಿದ್ರಿ:ನಾಪತ್ತೆಯಾದ ವ್ಯಕ್ತಿಯ ಶವ ಸಮುದ್ರ ತೀರದಲ್ಲಿ ಪತ್ತೆ-Times of karkala

ಪಡುಬಿದ್ರಿ:ಹತ್ತು ದಿನದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ತೆಂಕ ಎರ್ಮಾಳ್ ಗ್ರಾಮದ ಕರಾವಳಿ ಸಮುದ್ರ ತೀರದಲ್ಲಿ ಪೆನಿನ್ಸೂಲ ರೆಸಾರ್ಟ್‌ ಸಮೀಪದ ಸಮುದ್ರದ ತಡೆಗೋಡೆಗೆ ಹಾಕಿದ ಕಲ್ಲುಗಳ ಮಧ್ಯೆ ಮಧ್ಯೆ ಪತ್ತೆಯಾಗಿದೆ.  


ಸಾಂಧರ್ಭಿಕ ಚಿತ್ರ 


ಪಡುಬಿದ್ರಿ ನಡ್ಸಾಲು ನಿವಾಸಿ ಜಗದೀಶ್ ಆಚಾರ್ಯ (58) ಎಂಬುವವರು ಅಕ್ಟೊಬರ್ 17 ರಂದು ಎಂದಿನಂತೆ  ಪಡುಬಿದ್ರಿಯ ವಿನಾಯಕ ಏಜೆನ್ಸಿಯಲ್ಲಿ ಸೇಲ್ಸ್‌‌ಮೆನ್  ಕೆಲಸಕ್ಕೆಂದು  ಹೋದವರು ವಾಪಾಸ್ಸು ಮನೆಗೆ ಬಾರದೇ ನಾಪತ್ತೆಯಾಗಿದ್ದರು.ಈ ಬಗ್ಗೆ ಪ್ರಕರಣ ದಾಖಲಾಗಿತ್ತು.



ದಿನಾಂಕ 26 ರಂದು ಜಗದೀಶ್ ಆಚಾರ್ಯ ರವರ ಮೃತದೇಹವು ತೆಂಕ ಎರ್ಮಾಳ್ ಗ್ರಾಮದ ಕರಾವಳಿ ಸಮುದ್ರ ತೀರದಲ್ಲಿ ಪೆನಿನ್ಸೂಲ ರೆಸಾರ್ಟ್‌ ಸಮೀಪದ ಸಮುದ್ರದ ತಡೆಗೋಡೆಗೆ ಹಾಕಿದ ಕಲ್ಲುಗಳ ಮಧ್ಯೆ ದೊರೆತಿದೆ. ಜಗದಿಶ್ ಆಚಾರ್ಯ ರವರು ಈ ಮೊದಲೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಉಡುಪಿ ಮಿತ್ರಾ ಆಸ್ಫತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು,  ಅಲ್ಲದೇ ವಿಪರೀತ ಸಾಲ ಮಾಡಿಕೊಂಡು ಹಣಕಾಸಿನ ಸಮಸ್ಯೆಯಿಂದ ಸಮುದ್ರದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  


ಪೊಲೀಸ್ ವರದಿ:
ಪಡುಬಿದ್ರಿ: ಪಿರ್ಯಾದಿದಾರರಾದ ನಾಗೇಶ್ ಆಚಾರ್ಯ (38), ತಂದೆ: ದಿ, ವಾಮನ ಆಚಾರ್ಯ, ವಾಸ: #3-19. ಕಾಳಿಕಾಂಬ ನಿಲಯ, ಬೀಡು ಹಿರೇಬೆಟ್ಟು ಕರೆ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು ಇವರ ಅಣ್ಣ ಜಗದೀಶ್ ಆಚಾರ್ಯ (58) ಎಂಬುವವರು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿಯ ವಿನಾಯಕ ಏಜೆನ್ಸಿಯಲ್ಲಿ ಸೇಲ್ಸ್‌‌ಮೆನ್ ಕೆಲಸ ಮಾಡಿಕೊಂಡಿದ್ದು ದಿನಾಂಕ 17/10/2020 ರಂದು ಬೆಳಿಗ್ಗೆ 08:00 ಗಂಟೆಗೆ ಎಂದಿನಂತೆ ಕೆಲಸಕ್ಕೆಂದು ಹೋದವರು ವಾಪಾಸ್ಸು ಮನೆಗೆ ಬಾರದೇ  ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ನಂತರ ದಿನಾಂಕ 26/10/2020 ರಂದು ಜಗದೀಶ್ ಆಚಾರ್ಯ ರವರ ಮೃತದೇಹವು ತೆಂಕ ಎರ್ಮಾಳ್ ಗ್ರಾಮದ ಕರಾವಳಿ ಸಮುದ್ರ ತೀರದಲ್ಲಿ ಪೆನಿನ್ಸೂಲ ರೆಸಾರ್ಟ್‌ ಸಮೀಪದ ಸಮುದ್ರದ ತಡೆಗೋಡೆಗೆ ಹಾಕಿದ ಕಲ್ಲುಗಳ ಮಧ್ಯೆ ದೊರೆತಿರುತ್ತದೆ. ಜಗದಿಶ್ ಆಚಾರ್ಯ ರವರು ಈ ಮೊದಲೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಉಡುಪಿ ಮಿತ್ರಾ ಆಸ್ಫತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು,  ಅಲ್ಲದೇ ವಿಪರೀತ ಸಾಲ ಮಾಡಿಕೊಂಡು ಹಣಕಾಸಿನ ಸಮಸ್ಯೆಯಿಂದ ಸಮುದ್ರದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರ ಬಹುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 23/2020, ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಜಾಹೀರಾತು



https://www.timesofkarkala.in/2020/10/blog-post_8.html












 

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget