ಬೆಳ್ತಂಗಡಿ:ನೀರಿನ ಬಕೆಟ್‌ನೊಳಗೆ ಬಿದ್ದು ಮೃತಪಟ್ಟ ಎ0ಟು ತಿಂಗಳ ಹೆಣ್ಣು ಮಗು-Times of karkala

ಬೆಳ್ತಂಗಡಿ:ಇಲ್ಲಿನ ಅರಸಿನಮಕ್ಕಿ ಗ್ರಾಮದ ಕಲ್ಲಕೋಟೆ ಎಂಬಲ್ಲಿ ಎ0ಟು ತಿಂಗಳ ಹೆಣ್ಣು ಮಗುವೊಂದು ಬಚ್ಚಲು ಮನೆಯ ನೀರಿನ ಬಕೆಟ್‌ನೊಳಗೆ ಬಿದ್ದು ಧಾರುಣವಾಗಿ ಮೃತ್ಯುವಾದ ಘಟನೆ ವರದಿಯಾಗಿದೆ.

ಜಗದೀಶ್ ಆಚಾರ್ಯ ಮತ್ತು ವಿದ್ಯಾ ದಂಪತಿಯ ಪುತ್ರಿ, ಆಜ್ಞಾ ದುರ್ಘಟನೆಯಲ್ಲಿ ಅಸುನೀಗಿದ ಪುಟಾಣಿ ಬಾಲೆ.ತಾಯಿ ಬಟ್ಟೆ ಒಗೆಯುತ್ತಿದ್ದಸಂದರ್ಭ ಮಗು ಲೋಟವೊಂದನ್ನು ಹಿಡಿದುಕೊ0ಡು ಆಟವಾಡುತ್ತಿತ್ತು. 


ತಾಯಿ ಕೆಲಸದಲ್ಲಿ ನಿತರಾಗಿದ್ದುಸ್ವಲ್ಪ ಹೊತ್ತಿನ ಬಳಿಕ ಮಗು ಅಲ್ಲಿ ಗೋಚರಿಸುತ್ತಿರಲಿಲ್ಲ. ತಕ್ಷಣ ಬಚ್ಚಲು ಕೋಣೆಯಲ್ಲಿ ನೋಡಿದಾಗ ಮಗು ಬಕೆಟ್‌ನೊಳಗಡೆ ಬಿದ್ದು ಕೊನೆಯುಸಿರೆಳೆದಿತ್ತು.

ಕೈಯ್ಯಲ್ಲಿದ್ದ ಲೋಟದಲ್ಲಿ ಮಗು ನೀರಾಟ ಆಡಿ ಅಪಾಯದ ಅರಿವಿಲ್ಲದೇ ಆಯತಪ್ಪಿ ಬಕೆಟ್‌ನೊಳಗಡೆಯೇ ಬಿದ್ದು ಧಾರುಣವಾಗಿ ಮೃತಪಟ್ಟಿರುವ ಸಾಧ್ಯತೆ ಇದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಹೀರಾತು




https://www.timesofkarkala.in/2020/10/blog-post_8.html














Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget