ಧೋನಿ ಪುತ್ರಿಗೆ ರೇಪ್ ಬೆದರಿಕೆ ಹಾಕಿದ್ದಾತನ ಬಂಧನ-Times Of Karkala

 
ಅಹಮದಾಬಾದ್,ಅ.12:ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋತ ಕಾರಣಕ್ಕೆ ಮಹೇಂದ್ರ ಸಿಂಗ್ ಧೋನಿ ಅವರ 5 ವರ್ಷದ ಪುತ್ರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದ 16 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಬಂಧಿತ ಯುವಕನನ್ನು ಗುಜರಾತಿನ ಕಚ್ ಜಿಲ್ಲೆಯ ಕಪಾಯ ಗ್ರಾಮದ 12ನೇ ತರಗತಿಯ ವಿದ್ಯಾರ್ಥಿ ಎಂದು ಹೇಳಲಾಗಿದೆ.
ಈ ಅತ್ಯಾಚಾರ ಬೆದರಿಕೆಗಳು ಹಾಕಿರವುದಕ್ಕೆ ಹಲವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದು ಇದು ತೀರಾ ಕೀಳು ಮಟ್ಟದ ವರ್ತನೆ ಎಂದು ಹೇಳಿದ್ದರು. ನಮ್ಮ ರಾಷ್ಟ್ರ ಎತ್ತ ಸಾಗುತ್ತದೆ. ಇದು ತೀರಾ ಅಸಹ್ಯಕರ ಎಂದು ನಟಿ ನಗ್ಮಾ ಹೇಳಿದ್ದರು. ಹಾಗೆಯೇ ಜನಪ್ರತಿನಿಧಿಗಳು ಕೂಡಾ 5 ವರ್ಷದ ಬಾಲಕಿಗೆ ಅತ್ಯಾಚಾರ ಬೆದರಿಕೆ ಹಾಕಿರುವುದು ತೀರಾ ಅಸಹ್ಯ. ನಮ್ಮ ದೇಶಕ್ಕೆ ಏನಾಗುತ್ತಿದೆ? ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಎಂದು ಹೇಳಿದ್ದರು.
ಇನ್ನು ಆರೋಪಿಯು ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಧೋನಿ ಇನ್ ಸ್ಟಾಗ್ರಾಮ್  ಖಾತೆಯಲ್ಲಿ ಅಸಭ್ಯವಾಗಿ ನಿಂದಿಸಿದ್ದು ಪುತ್ರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ. ವಿಚಾರಣೆಯ ವೇಳೆ ಬೆದರಿಕೆ ಹಾಕಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಜಾರ್ಖಂಡ್‍ನ ರಾಂಚಿಯಲ್ಲಿರುವ ರತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಹೀರಾತು
https://www.timesofkarkala.in/2020/10/blog-post_8.html
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget