ನಟಿ ಕಂಗನಾ ರಣಾವತ್ ಸಹೋದರಿ ವಿರುದ್ಧ ಎಫ್ ಐ ಆರ್ ದಾಖಲು-Times Of Karkala

ಮುಂಬಯಿ,ಅ.18:ಬಾಲಿವುಡ್ ನಟಿ ಕಂಗನಾ ರಣಾವತ್ ಸಹೋದರಿ ರಂಗೋಲಿ ಚಾಂದೇಲ್ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಬಾಂದ್ರಾ ನ್ಯಾಯಾಲಯವು ಪೊಲೀಸರಿಗೆ  ನಿರ್ದೇಶಿಸಿದೆ. 

ಇಬ್ಬರು ಸೋದರಿಯರು ಬಾಲಿವುಡ್ ಹಾಗು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಟ್ವೀಟ್ ಮಾಡುತ್ತಿದ್ದಾರೆ ಎಂದು ಮುನ್ನವರಲಿ ಅಕಾ ಸಾಹಿಲ್ ದೂರು ದಾಖಲಿಸಿದ್ದಾರೆ. ಅಲ್ಲದೆ, ಕಂಗನಾ ಹಾಗೂ ಅವರ ಸೋದರಿ ಅವರ ಟ್ವೀಟ್ ಗಳು  ಕೋಮು ದ್ವೇಷಗಳನ್ನು ಹರಡುತ್ತಿವೆ. ಇಬ್ಬರು ಮಾಧ್ಯಮಗಳ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 
ಕೆಲ ದಿನಗಳ ಹಿಂದೆ ಸಂಸತ್ತು ಅಂಗೀಕರಿಸಿದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಟ್ವೀಟ್ ಮಾಡಿದಕ್ಕಾಗಿ ಕರ್ನಾಟಕದ ತುಮಕೂರು ಜಿಲ್ಲಾ ಪೊಲೀಸರು ಕಂಗನಾ ರಣಾವತ್ ವಿರುದ್ಧ ಕೇಸು ದಾಖಲಿಸಿದ್ದಾರೆ. 
ರೈತರ ಮೇಲೆ ಮಾಡಿದ ಟ್ವೀಟ್ ಗಾಗಿ ಕಂಗನಾ ವಿರುದ್ಧ ಪ್ರಕರಣ ದಾಖಲಿಸುವಂತೆ ಕ್ಯಾತ್ಸಂದ್ರ ಪೊಲೀಸು ಠಾಣೆಗೆ ತುಮಕೂರು ನ್ಯಾಯಾಲಯ ನಿರ್ದೇಶಿಸಿದ ನಂತರ ಎಫ್ ಐ ಆರ್ ದಾಖಲಿಸಲಾಗಿದೆ.  

ಜಾಹೀರಾತು
https://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget