ಮೂಡಬಿದಿರೆ,ಅ,11: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದವರನ್ನು ಕಂಡು ಪೊಲೀಸರು ತಕ್ಷಣ ಗಾಳಿಯಲ್ಲಿ ಗುಂಡು ಹಾರಿಸಿ, ಆರು ಗೋವುಗಳನ್ನು ರಕ್ಷಿಸಿದ್ದಾರೆ. ಈ ನಡುವೆ ಗೋಕಳ್ಳರು ಪರಾರಿಯಾಗಿದ್ದಾರೆ.

ಭಾನುವಾರ ಮುಂಜಾನೆ ಶಿರ್ತಾಡಿಯಿಂದ ಗೋಕಳ್ಳರು 6 ಗೋವುಗಳನ್ನು ರಿಟ್ಸ್ ಕಾರಿನಲ್ಲಿ ತುಂಬಿಸಿ ಸಾಗಿಸುತ್ತಿದ್ದರು. ಹೌದಲ ಎಂಬಲ್ಲಿ ಪೊಲೀಸರು ಕಾರನ್ನು ತಡೆದಿದ್ದಾರೆ. ಅವರು ಕಾರನ್ನು ಪೊಲೀಸ್ ವಾಹನಕ್ಕೆ ಗುದ್ದಿಸಿ ಪೋಲೀಸರ ಮೇಲೆ ದಾಳಿ ನಡೆಸಲು ಯತ್ನಿಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಮೂಡಬಿದಿರೆ ವೃತ್ತ ನಿರೀಕ್ಷಕ ಬಿ ಎಸ ದಿನೇಶ್ ಕುಮಾರ್ ಗೋಕಳ್ಳರ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗೋಕಳ್ಳರು ವಾಹನ ಮತ್ತು ದನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.
Post a comment