ಪಡುಬಿದ್ರಿ, ಅ.30:ಈದ್ ಮಿಲಾದ್ ಹಬ್ಬದ ಪ್ರಯುಕ್ತ ಉಡುಪಿ ಪಡುಬಿದ್ರಿಯ ಸಮಾನ ಮನಸ್ಕ ಮುಸ್ಲಿಂ ಬಾಂಧವರಿಂದ ಬಡವರು, ನಿರ್ಗತಿಕರು ಹಾಕು ಭಿಕ್ಷುಕರಿಗೆ ಒಂದು ಹೊತ್ತಿನ ಊಟ ವಿತರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ನೀನು ಊಟ ಮಾಡುವ ಅನ್ನದ ಪ್ರತಿಯೊಂದು ತುತ್ತಿನಲ್ಲೂ ಬಡವರ ಪಾಲಿದೆ ಎನ್ನುವಂತಹ ಪ್ರವಾದಿಯವರ ಮಾತನ್ನು ಜಗತ್ತಿನ ಪ್ರತಿಯೊಬ್ಬ ಮುಸಲ್ಮಾನನು ನೆನೆಪಿನಲ್ಲಿ ಇಟ್ಟುಕೊಂಡು ಅದರಂತೆ ನಡೆದರೆ ಜಗತ್ತಿನಲ್ಲಿ ಯಾರೊಬ್ಬರೂ ಉಪವಾಸದಿಂದ ಇರಲು ಸಾಧ್ಯವೇ ಇಲ್ಲ. ಮನುಷ್ಯ ಸ್ವಾರ್ಥಿ ಆಗಿರುವ ಈ ಕಾಲಘಟ್ಟದಲ್ಲಿ ಹಸಿವಿನಿಂದ ಬಳಲುತ್ತಿರುವವರ ಬಗ್ಗೆ ಕಾಳಜಿ ತೋರುವ ಅಗತ್ಯತೆಯಿದೆ.
ಇದನ್ನು ಮನಗಂಡು ಉಡುಪಿಯ ಸಮಾನಮನಸ್ಕ ಸ್ನೇಹಿತರಾದ ಅನ್ಸಾರ್ ಅಹಮದ್, ಅಮೀರ್ ಪಡುಬಿದ್ರಿ, ಸೈಯದ್ ನಿಜಾಮುದ್ದೀನ್ ಹಾಗೂ ಅವರ ತಂಡದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸ್ನೇಹಿತರು ಸೇರಿಕೊಂಡು 600 ಊಟದ ಪಟ್ಟಣಗಳನ್ನು ತಯಾರಿಸಿ ಪಡುಬಿದ್ರಿಯಿಂದ ಬ್ರಹ್ಮಾವರದ ವರೆಗೆ ದಾರಿಬದಿಯಲ್ಲಿ ಕಾಣಸಿಗುವ ನಿರ್ಗತಿಕರು, ಭಿಕ್ಷುಕರು ಹಾಗೂ ಹಸಿದವರಿಗೆ ಊಟದ ಪೊಟ್ಟಣ ಗಳನ್ನು ವಿತರಿಸಲಾಯಿತು.
ಮಧ್ಯಾಹ್ನದ ಊಟವನ್ನು ಬೀಡಿನಗುಡ್ಡೆ ನಿರ್ಗತಿಕರ ಕೇಂದ್ರದಲ್ಲಿ ವಾಸವಾಗಿರುವ ಸರೋಜಮ್ಮನ ಜೊತೆ ಕುಳಿತುಕೊಂಡು ಮಾಡಲಾಯಿತು.
Post a comment