ಹೆಬ್ರಿಯ ಪ್ರತಿಷ್ಠಿತ ಸಾಲು ಮರದ ತಿಮ್ಮಕ್ಕ ಪಾಕ್೯ ( ವೃಕ್ಷೋದ್ಯಾನವನ) ಇದೇ ಅಕ್ಟೋಬರ್ 24 ಶನಿವಾರದಿಂದ ಸಾರ್ವಜನಿಕರಿಗೆ ಟಿಕೇಟ್ ಸಹಿತವಾಗಿ ಮುಕ್ತ ಪ್ರವೇಶ ನೀಡಲಾಗುತ್ತದೆ.
ಸಾರ್ವಜನಿಕರು ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹೆಬ್ರಿ ವಲಯ ಅರಣ್ಯಾಧಿಕಾರಿ ಶ್ರೀ ಮಾರ್ಕಂಡೇಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಕೃತಿಯ ರಮಣೀಯ
ವಿಶಾಲವಾದ ಜಾಗದಲ್ಲಿ ಪಾಕ್೯ ಇದ್ದು ಮಕ್ಕಳ ಸಹಿತ ಎಲ್ಲರಿಗೂ ಆಕರ್ಷಿಸಲು ಕೊರೊನಾ ಬಳಿಕ ಮತ್ತೇ ಸಜ್ಜಾಗಿದೆ.
ವಿವಿಧ ಔಷಧೀಯ ಗಿಡಗಳು, ಕಂಬಳ ಸಹಿತ ಗ್ರಾಮೀಣ ಪರಂಪರೆಯನ್ನು ನೆನಪಿಸುವ ಕಲಾಕೃತಿಗಳು, ಮಕ್ಕಳ ಆಟದ ವಸ್ತುಗಳು ಸಹಿತ ವೈವಿಧ್ಯತೆಗಳು ಪಾಕ್೯ನ ಆಕರ್ಷಣೆಯಾಗಿದೆ.
Post a comment