ಶಕ್ತಿಯ ಆರಾಧನೆಯಿಂದ ಬದುಕು ಪಾವನ : ಅಂಬಾತನಯ ಮುದ್ರಾಡಿ-Times Of Karkala

ಹೆಬ್ರಿ,ಅ. 24: ಶಕ್ತಿದೇವತೆಯನ್ನು ನಾಡಿನೆಲ್ಲೆಡೆ ಆರಾಧಿಸುತ್ತಿರುವುದು ಅತ್ಯಂತ ಸ್ತುತ್ಯರ್ಹ ಸಂಗತಿ, ಆ ಮೂಲಕ ನಾಡಿನ ಉದ್ಧಾರವಾಗುತ್ತದೆ, ಬದುಕು ಪಾವನವಾಗುತ್ತದೆ, ಎಲ್ಲಾ ತತ್ವಗಳನ್ನು ನಮ್ಮೊಳಗೆ ಬೆರೆಸಿಕೊಂಡಾಗ ನಮ್ಮತನ ಉಳಿದು  ನಮಗೆ ಶಕ್ತಿ ಬರುತ್ತದೆ ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು.ಅವರು ಶನಿವಾರ ಮುದ್ರಾಡಿ ಮಂಜುನಾಥ ಪೂಜಾರಿ ನೇತ್ರತ್ವದಲ್ಲಿ ಆರಂಭಗೊಂಡ  ಮುದ್ರಾಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಪ್ರಥಮ ವರ್ಷದ ಸಂಭ್ರಮದಲ್ಲಿ ಊರಿನ ಗೌರವ ಸ್ವೀಕರಿಸಿ ಮಾತನಾಡಿದರು.

ಮುದ್ರಾಡಿಯ ಎರಡು ಕಣ್ಣುಗಳು : 

ನನ್ನ ಇಬ್ಬರು ಶಿಷ್ಯರಾದ ಸಿರಿಬೀಡು ದಿವಾಕರ ಶೆಟ್ಟಿ ಮತ್ತು ಮುದ್ರಾಡಿ ಮಂಜುನಾಥ ಪೂಜಾರಿ ಮುದ್ರಾಡಿಯ ಎರಡು ಕಣ್ಣುಗಳು, ಅವರ ಕೈಯಿಂದ ಸಾಕಷ್ಟು ಒಳ್ಳೇಯ ಕೆಲಸಗಳು ನಡೆಯುತ್ತಿದ್ದು ಇನ್ನಷ್ಟು ಸೇವೆಗಳು ಆಗಲಿ ಎಂದು ಅಂಬಾತನಯ ಮುದ್ರಾಡಿ ಹಾರೈಸಿದರು. 

ಮುದ್ರಾಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಮುಂಬೈ ಉದ್ಯಮಿ ಮುದ್ರಾಡಿ ದಿವಾಕರ ಶೆಟ್ಟಿಯವರು ಮಾತನಾಡಿ ಶಾರದೆಯ ಹೆಸರಿನಲ್ಲಿ ಇನ್ನಷ್ಟು ಸೇವೆಗಳು ನಿರಂತರವಾಗಿ ನಡೆಯಲಿ ಎಂದು ಶುಭಹಾರೈಸಿದರು.
ಮುದ್ರಾಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕ ಶಾರದೋತ್ಸವ ಆರಂಭಿಸುವ ಮೂಲಕ ಹಲವು ವರ್ಷಗಳ ಕನಸು ನನಸಾಗುತ್ತಿದೆ. ಸಮಿತಿಯ ಮೂಲಕ ಶಿಕ್ಷಣ ನೆರವು ಸಹಿತ ಹಲವು ಸಮಾಜಮುಖಿ ಸೇವೆಗಳನ್ನು ಮಾಡುವ ಕನಸು ಇದೆ, ಪ್ರಥಮ ವರ್ಷ ವಂತಿಗೆ ಪಡೆಯದೆ ಶಾರದೋತ್ಸವ ಸಂಭ್ರಮ ಮಾಡುತ್ತಿದ್ದೇವೆ. ಮುಂದೆ ಯಶಸ್ಸಿಗಾಗಿ ಮತ್ತು ನಿರಂತರ ಸೇವೆಗಾಗಿ ಎಲ್ಲರೂ ಕೈಜೊಡಿಸುವಂತೆ ಮನವಿ ಮಾಡಿದರು.

 ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಂಬಾತನಯ ಮುದ್ರಾಡಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀನಿವಾಸ ಭಂಡಾರಿ, ನಿವೃತ್ತ ಮುಖ್ಯ ಶಿಕ್ಷಕ ಚಂದ್ರಕಾಂತ್‌ ಅಂಡಾರು, ಯುವ ಸಾಹಿತಿ ಚೈತ್ರ ಕಬ್ಬಿನಾಲೆ, ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. 
ಎಸ್‌ ಎಸ್‌ ಎಲ್‌ ಸಿ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಗದು ಬಹುಮಾನ ನೀಡಿ ಗೌರವಿಸಲಾಯಿತು. ಮುದ್ರಾಡಿ ಎಂಎನ್‌ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಇಂದಿರ ಬಾಯರಿ, ಹೆಬ್ರಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ ಪೂಜಾರಿ, ಮುದ್ರಾಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಕಾರ್ಯದರ್ಶಿ ಹರೀಶ ಶೆಟ್ಟಿ ಮದಗ, ಗೌರವ ಸಲಹೆಗಾರರಾದ ಶಶಿಕಲಾ ದಿನೇಶ್‌ ಪೂಜಾರಿ, ಬಲ್ಲಾಡಿ ಚಂದ್ರಶೇಖರ ಭಟ್‌, ವಿಶುಕುಮಾರ್‌ ಉಪ್ಪಳ, ಅಣ್ಣಪ್ಪ ಮುದ್ರಾಡಿ, ಸತೀಶ ಶೇರಿಗಾರ್‌, ಸನತ್‌ ಕುಮಾರ್‌, ಪ್ರಶಾಂತ ಪೈ, ಮಹೇಶ ಕಾನ್ಗುಂಡಿ, ಅಶ್ವಿನಿ ಗೌಡ, ಅಶ್ವಿನಿ ಶೆಟ್ಟಿ, ಅಶೋಕ ಪೂಜಾರಿ, ವಿಶುಕುಮಾರ್‌, ಸತ್ಯಾನಂದ ಪೂಜಾರಿ, ಮನೋಹರ ಹೆಗ್ಡೆ, ಸಂದೀಪ ಶೆಟ್ಟಿ, ಸಂತೋಷ ಶೆಟ್ಟಿ ಭಕ್ರೆ,ಉದಯ ಹೆಗ್ಡೆ ಬಲ್ಲಾಡಿ, ಪ್ರಮುಖರು, ಶಿಕ್ಷಕರು, ಗಣ್ಯರು, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
https://www.timesofkarkala.in/2020/10/blog-post_8.htmlPost a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget