ಹೆಬ್ರಿ,ಅ,4 : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕುಚ್ಚೂರು ಹಾಲು ಉತ್ಪಾದಕರ ಸಹಕಾರಿ ಸಂಘ, ಕುಚ್ಚೂರು ಹಾಲಿಕೊಡ್ಲು ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ಕುಚ್ಚೂರು ಕುಡಿಬೈಲು ಶಾಂತಿ ನಿಕೇತನ ಯುವ ವೃಂದದ ಸದಸ್ಯರು ಶುಕ್ರವಾರ ಗಾಂಧಿ ಜಯಂತಿ ಪ್ರಯುಕ್ತ ಬೃಹತ್ ಸ್ವಚ್ಚತಾ ಅಭಿಯಾನ ನಡೆಸಿದರು.
ಗಾಂಧಿಜಯಂತಿ ಸಂಭ್ರಮವನ್ನು ಸ್ಥಳೀಯ ಯುವ ಮುಖಂಡ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಾನ್ಬೇಟ್ಟು ಮಹೇಶ್ ಶೆಟ್ಟಿ ಉದ್ಘಾಟಿಸಿದರು. ಧರ್ಮಸ್ಥಳ ಯೋಜನೆಯ ಮೇಲ್ವೀಚಾರಕ ಪ್ರವೀಣ್ ಆಚಾರ್ಯ, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
Post a comment