ಹೆಬ್ರಿ ಜೇಸಿಐ ವತಿಯಿಂದ ಸಮಾಜ ಸೇವಾ ಕಾರ್ಯ-Times Of Karkala

ಹೆಬ್ರಿ, ಅ,5 : ಮುದ್ರಾಡಿಯಲ್ಲಿ ಜಾನುವಾರುಗಳ ಕುಡಿಯುವ ನೀರಿನ ಟ್ಯಾಂಕ್‌ ಅನ್ನು ಜೇಸಿಐ ವಲಯಾಧ್ಯಕ್ಷ ಕಾರ್ತೀಕೆಯ ಮಧ್ಯಸ್ಥ ಲೋಕಾರ್ಪಣೆ ಮಾಡಿದರು.  ಹೆಬ್ರಿ ಬಸ್‌ ನಿಲ್ದಾಣದಲ್ಲಿ ಪ್ರವಾಸಿತಾಣಗಳ ಮಾಹಿತಿ ಫಲಕವನ್ನು ಕೂಡ  ಅನಾವರಣಗೊಳಿಸಲಾಯಿತು.


ಹೆಬ್ರಿ ಜೇಸಿಐಗೆ ಶುಕ್ರವಾರ ಅಧೀಕೃತ ಬೇಟಿ ನೀಡಿ ಸಭೆಯಲ್ಲಿ ಮಾತನಾಡಿದ ವಲಯಾಧ್ಯಕ್ಷ ಕಾರ್ತೀಕೆಯ ಮಧ್ಯಸ್ಥ, ಹೆಬ್ರಿ ಜೇಸಿಐ ಸಮಾಜಸೇವೆಯನ್ನು ಶ್ಲಾಘಿಸಿದರು.ಹೆಬ್ರಿ ಜೇಸಿಐ ನಿರಂತರ ಸಮಾಜಮುಕಿ ಸೇವೆಯನ್ನು ಮಾಡುತ್ತ ಎಲ್ಲರಿಗೂ ಮಾದರಿಯಾಗಿದೆ ಎಂದು ಅವರು ಹೇಳಿದರು. 
ಜೇಸಿಐ ಅಧ್ಯಕ್ಷೆ ಸುನೀತಾ ಅರುಣ್‌ ಕುಮಾರ್‌ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಜೇಸಿಐ ವಲಯ ಕಾರ್ಯದರ್ಶಿ ಸಮದ್‌ ಖಾನ್‌, ಶೇಷಗಿರಿ ಭಟ್‌, ಹೆಬ್ರಿ ಜೇಸಿಐ ಕಾರ್ಯದರ್ಶಿ ನಾಗರಾಜ್‌, ಜೇಸಿರೆಟ್‌ ಅಧ್ಯಕ್ಷೆ ಸುಪ್ರೀತಾ ಪಿ.ಶೆಟ್ಟಿ, ಯುವಜೇಸಿ ಅಧ್ಯಕ್ಷ ಆಕಾಶ್‌, ಜೇಸಿಐ ಪೂರ್ವಾಧ್ಯಕ್ಷರಾದ ರಾಮಕೃಷ್ಣ ಆಚಾರ್ಯ, ಕೃಷ್ಣ ಶೆಟ್ಟಿ, ಸಂತೋಷ ಕುಮಾರ್‌ ಶೆಟ್ಟಿ, ಡಾ. ಗಣಪತಿ ಎಚ್,ಎ.ರಾಧಾಕೃಷ್ಣ ಕ್ರಮಧಾರಿ, ಪುಟ್ಟಣ್ಣ ಭಟ್‌, ಪ್ರಶಾಂತ ಪೈ, ನಿರ್ಮಲ, ಸುಜಾತ, ಸೋನಿ, ಪ್ರಮುಖರಾದ ಮುದ್ರಾಡಿ ಮಂಜುನಾಥ ಪೂಜಾರಿ, ಅರುಣ್‌ ಕುಮಾರ್‌ ಹೆಗ್ಡೆ, ಅರ್ಜುನ್‌ ಹೆಗ್ಡೆ, ಗಣಪತಿ ಮುದ್ರಾಡಿ, ಹರೀಶ್‌ ಮತ್ತಿತರರು ಉಪಸ್ಥಿತರಿದ್ದರು. 
 

  

ಜಾಹೀರಾತು





https://www.timesofkarkala.in/2020/10/blog-post_8.html

















Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget