ಖಜಾನೆ ಕೊಡಮಣಿತ್ತಾಯ ಸಮುದಾಯ ಭವನಕ್ಕೆ 25 ಲಕ್ಷ ಅನುದಾನ : ಸುನೀಲ್‌ ಕುಮಾರ್

ಹೆಬ್ರಿ,ಅ 4 : ಕೆಳಖಜಾನೆಯ ಕಾಂಕ್ರೀಟ್‌ ರಸ್ತೆಯ ವಿಸ್ತರಣೆಗೆ ಅನುದಾನ ನೀಡುವ ಜೊತೆಗೆ ಖಜಾನೆ ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವ ಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಶಾಸಕ ಸುನೀಲ್‌ ಕುಮಾರ್‌ ಭರವಸೆ ನೀಡಿದರು.

ಅವರು ಭಾನುವಾರ ಸಂಜೆ  ಶಿವಪುರ ಗ್ರಾಮದ ಕೆಳಖಜಾನೆ ಮತ್ತು ಖಜಾನೆ ಕೊಡಮಣಿತ್ತಾಯ ದೈವಸ್ಥಾನದ ಕಾಂಕ್ರೀಟ್‌ ರಸ್ತೆಯನ್ನು ಲೋಕರ‍್ಪಣೆ ಮಾಡಿ ಮಾತನಾಡಿದರು. ಎಲ್ಲರ ಜೊತೆ ಸೇರಿ ಶಿವಪುರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಸುನೀಲ್‌ ಕುಮಾರ್‌ ತಿಳಿಸಿದರು. 
ಕೊಡಮಣಿತ್ತಾಯ ದೈವಸ್ಥಾನದ ರಸ್ತೆ ವಿಸ್ತರಣೆ ಸಹಿತ ಇನ್ನುಳಿದ ಅಗತ್ಯ ಕೆಲಸಗಳಿಗೆ ಶೀಘ್ರವಾಗಿ ಅನುದಾನ ನೀಡುವಂತೆ ಶಿವಪುರದ ಜನನಾಯಕ ಹುಣ್ಸೆಡಿ ಸುರೇಶ ಶೆಟ್ಟಿ ಗ್ರಾಮಸ್ಥರ ಪರವಾಗಿ ಮನವಿ ಮಾಡಿ ಶಾಸಕ ಸುನೀಲ್‌ ಕುಮಾರ್‌ ಅವರಿಗೆ ಕೃತಜ್ಞತೆ ಸಲ್ಲಿಸಿದರು. 
ಖಜಾನೆ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನದ ಮುಖ್ಯಸ್ಥರಾದ ರಾಜಾರಾಮ್‌ ಹೆಗ್ಡೆ ದೈವಸ್ಥಾನದಲ್ಲಿ  ಶಾಸಕ ಸುನೀಲ್‌ ಕುಮಾರ್‌ ಅವರನ್ನು ಗೌರವಿಸಿದರು. ಕೆಳಖಜಾನೆ ಗ್ರಾಮಸ್ಥರ ಪರವಾಗಿ ಖಜಾನೆ ಸುಕುಮಾರ್‌ ಆಚಾರ್ಯ ಮತ್ತು ಶಂಕರ ನಾಯ್ಕ್‌ ಸನ್ಮಾನಿಸಿದರು. ಕೆಳಖಜಾನೆ ಹತ್ತರಕಟ್ಟೆಗೆ ಅನುದಾನ ನೀಡುವಂತೆ ಶಂಕರ ನಾಯ್ಕ್‌ ಮತ್ತು ಕುಡಿಯುವ ನೀರಿನ ಸರಬರಾಜಿನ ಟ್ಯಾಂಕ್‌ ನಿರ್ಮಾಣ ಮಾಡುವಂತೆ   ಕೆಳಖಜಾನೆ ಅಶೋಕ್‌ ಆಚಾರ್ಯ  ಶಾಸಕರಿಗೆ ಮನವಿ ಮಾಡಿದರು. ಗೋಪಾಲಕೃಷ್ಣ ಕಾಮತ್‌, ಭಾಲಕೃಷ್ಣ ಆಚಾರ್ಯ, ಶಂಕರ ನಾಯ್ಕ್‌, ಶಂಕರ ಕುಲಾಲ್‌, ಮಹಾಬಲ ಹಾಂಡ, ಸುರೇಶ ನಾಯಕ್‌, ಅಶೋಕ ಆಚರ‍್ಯ, ಸಂಜೀವ ನಾಯ್ಕ್‌, ಚಂದ್ರಶೇಖರ್‌, ವೆಂಕಪ್ಪ ನಾಯ್ಕ್‌, ಸದಾನಂದ ನಾಯ್ಕ್‌, ಲತೇಶ್‌, ಪ್ರತಾಪ್‌, ಶೈಲೇಶ್‌, ಪ್ರದೀಪ್‌, ಸಂತೋಷ್‌, ವನಿತಾ, ಶ್ರೀಲತಾ, ಲಾವಣ್ಯ, ಉಪೇಂದ್ರ ಉಪಸ್ಥಿತರಿದ್ದರು.
 ಖಜಾನೆ ಕೊಡಮಣಿತ್ತಾಯ ಸ್ಥಾನದಲ್ಲಿ ನಡೆದ ಸಭೆಯಲ್ಲಿ ಹಿರಿಯರಾದ ರಾಜು ಶೆಟ್ಟಿ, ಶ್ಯಾಮ ಶೆಟ್ಟಿ, ಬಿಜೆಪಿ ಯುವ ಮುಖಂಡ ಖಜಾನೆ ಸಂದೇಶ ಶೆಟ್ಟಿ, ರತ್ನಾಕರ ನಾಯ್ಕ್‌, ಬಿಜೆಪಿ ನಾಯಕ ಸುರೇಶ್‌ ಶೆಟ್ಟಿ ಶಿವಪುರ, ಹೆಬ್ರಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ್‌ ಕುಮಾರ್‌ ಶಿವಪುರ, ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ಶಿವಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಗಂಧಿ ನಾಯ್ಕ್‌, ಸದಸ್ಯರಾದ ಖಜಾನೆ ಗೀತಾ ಶೆಟ್ಟಿ, ಸುಕನ್ಯಾ ಆಚರ‍್ಯ, ಶಿಕ್ಷಕ ಲಕ್ಷ್ಮೀನಾರಾಯಣ ಬರ‍್ಕರ್‌ ಮತ್ತಿತರರು ಉಪಸ್ಥಿತರಿದ್ದರು.    

ಜಾಹೀರಾತು

https://www.timesofkarkala.in/2020/10/blog-post_8.html

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget