ಹೆಬ್ರಿ:ಚಾರ ಮೇಲ್ಬೆಟ್ಟು ಶ್ರೀಕ್ಷೇತ್ರ ಬ್ರಹ್ಮ ಬೈದೆರ್ಕಳ ಗರಡಿಯ ದರ್ಶನ ಪಾತ್ರಿ ಯಾಗಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ದಿನೇಶ ಪೂಜಾರಿ ಅವರು ಇತ್ತೀಚೆಗೆ ನಿಧನರಾಗಿದ್ದು ಅಖಿಲ ಭಾರತ ತುಳುನಾಡ ದೈವರಾಧಕರ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ಮತ್ತು ಹೆಬ್ರಿ ಘಟಕದ ವತಿಯಿಂದ ಬುಧವಾರ ಮೃತರ ಮನೆಗೆ ತೆರಳಿ ಶೃದ್ಧಾಂಜಲಿ ಸಲ್ಲಿಸಿ 10 ಸಾವಿರ ರೂಪಾಯಿ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.
ಹೆಬ್ರಿ ಘಟಕದ ಹಿರಿಯ ಗೌರವ ಸಲಹೆಗಾರ ಮಂಡಾಡಿಜಡ್ಡು ಅಣ್ಣಪ್ಪ ಕುಲಾಲ್ ಅವರು ದಿನೇಶ್ ಪೂಜಾರಿ ದೈವಾರಾಧನೆ ಕ್ಷೇತ್ರದಲ್ಲಿ ನಡೆದು ಬಂದ ಶಿಸ್ತು ಬದ್ಧವಾದ ಚಾಕ್ರಿ ಯನ್ನು ಸ್ಮರಿಸಿದರು.
ಅಖಿಲ ಭಾರತ ತುಳುನಾಡ ದೈವರಾಧಕರ ಸಹಕಾರಿ ಒಕ್ಕೂಟದ ಉಡುಪಿ ಜಿಲ್ಲಾ ಅಧ್ಯಕ್ಷ ರವಿ ಶೆಟ್ಟಿ ಮಣಿಪಾಲ್ ದಿನೇಶ್ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಕುಟುಂಬಕ್ಕೆ ಧೈರ್ಯ ತುಂಬಿದರು.
ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿರುವ ಹೆಬ್ರಿ ಘಟಕದ ಸಂಚಾಲಕ ವಿನೋದ್ ಶೆಟ್ಟಿ , ಉಪಾಧ್ಯಕ್ಷ ಯೋಗೇಶ್ ಪೂಜಾರಿ , ಅನಿಷ್ ಕೋಟ್ಯಾನ್ ಕೋಶಧಿಕಾರಿ ಬ್ರಹ್ಮಾವರ ಘಟಕದ ಅಧ್ಯಕ್ಷ ಶ್ರೀಧರ್ ಪೂಜಾರಿ , ಸಾಂಸ್ಕೃತಿಕ ಕಾರ್ಯದರ್ಶಿ ಲೀಲಧರ್ ಪಂಬದ , ಸಂಘಟನಾ ಕಾರ್ಯದರ್ಶಿ ಸುನಿಲ್, ಹೆಬ್ರಿ ಘಟಕದ ಅಧ್ಯಕ್ಷ ಸುಕುಮಾರ್ ಪೂಜಾರಿ ಮುದ್ರಾಡಿ , ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾಣಾರ , ಉಪಾಧ್ಯಕ್ಷ ನರಸಿಂಹ ಪರವ ,ಅರುಣ್ ಪೂಜಾರಿ ಸದಸ್ಯರಾದ ರಂಗ ಪಾಣಾರ , ಗುಂಡು ಪರವ ,ಸಂತೋಷ್ ಪೂಜಾರಿ ಕೆರ್ಜಾಡಿ,ಸಂತೋಷ್ ಪಾಣಾರ,ಸಂತೋಷ್ ಪೂಜಾರಿ ಮುದ್ರಾಡಿ ,ಮಾಧವ ಪಾಣಾರ ,ಉಮೇಶ್ ಪಾಣಾರ,ವಿಠ್ಠಲ್ ಪೂಜಾರಿ,ಸುಧನ್ವ ಮುದ್ರಾಡಿ ಇದ್ದರು.
Post a comment