ಉಡುಪಿ,ಅ.30:ಮಾರ್ವಾಡಿ ಹಟಾವೋ ಎನ್ನುವ ಆನ್ಲೈನ್ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆಯ ಕಾರ್ಯಕರ್ತರು ಉಡುಪಿಯಲ್ಲಿ ಮಾರ್ವಾಡಿಗಳನ್ನು ಸೇರಿಸಿ ಬೈಠಕ್ ನಡೆಸಿದರು.
ಉಡುಪಿಯ ಹಿಂದೂ ಮಾರ್ವಾಡಿಗಳ ಅಂಗಡಿಗಳಿಗೆ ಭೇಟಿ ನೀಡಿ ಆತ್ಮವಿಶ್ವಾಸ ತುಂಬಲಾಯಿತು. ಉಡುಪಿಯಲ್ಲಿ ಬಹುಪಾಲು ವ್ಯಾಪಾರ ವಹಿವಾಟು ಅನ್ಯಧರ್ಮಿಯರ ಕಪಿಮುಷ್ಟಿಯಲ್ಲಿದ್ದು ಹಿಂದೂ ಮಾರ್ವಾಡಿಗಳು ಕೆಲ ವ್ಯಾಪಾರಗಳಲ್ಲಿ ಬಿಗಿ ಹಿಡಿತ ಸಾಧಿಸಿದ್ದಾರೆ. ಇದು ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಕಾರಣಕ್ಕಾಗಿಯೇ 'ಮಾರ್ವಾಡಿ ಹಟಾವೋ' ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎಕನಾಮಿಕ್ ಜಿಹಾದ್ ನ ಭಾಗವಾಗಿ ಒಂದು ವ್ಯವಸ್ಥಿತ ಷಡ್ಯಂತ್ರ ರೂಪಿಸಲಾಗಿದೆ ಎಂಬ ಭಾವನೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಸಮಸ್ತ ಹಿಂದೂ ಸಮಾಜ ಹಿಂದೂ ಮಾರ್ವಾಡಿಗಳ ಬೆಂಬಲಕ್ಕೆ ನಿಲ್ಲುತ್ತದೆ.
ಹಿಂದೂ ಸಮಾಜ ಈಗಲಾದರೂ ಎಚ್ಚೆತ್ತುಕೊಳ್ಲಬೇಕಾದ ಅನಿವಾರ್ಯತೆಯಿದೆ. ಹಿಂದೂಗಳ ವ್ಯಾಪಾರ ವಹಿವಾಟು ನಮ್ಮವರ ಜತೆ ಮಾತ್ರ ಅನ್ನುವ ಬದ್ಧತೆ ಇದ್ದಾಗ ಹಿಂದೂ ಸಮಾಜದ ಮುಂದಿನ ಪೀಳಿಗೆ ನಿಶ್ಚಿಂತೆಯಿಂದ ಬದುಕಬಹುದು. ಈ ನಿಟ್ಟಿನಲ್ಲಿ ಸಮಸ್ತ ಹಿಂದೂ ಬಾಂಧವರು ಜಾಗ್ರತೆ ವಹಿಸಬೇಕು ಎಂದು ಕಾರ್ಕಳ ತಾಲೂಕು ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ ಹೇಳಿದ್ದಾರೆ.
Post a comment