ನವದೆಹಲಿ,ಅ.25: ಕಂತು ಮರುಪಾವತಿ ಮುಂದೂಡಿಕೆಯ ಆರು ತಿಂಗಳ ಅವಧಿಯ ಚಕ್ರಬಡ್ಡಿಯನ್ನು ಸಾಲಗಾರರ ಖಾತೆಗೆ ಜಮಾ ಮಾಡುವಂತೆ ಕೇಂದ್ರ ಸರಕಾರವು ಶನಿವಾರ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ರೂ 2 ಕೋಟಿವರೆಗಿನ ಸಾಲಗಳಿಗೆ ಇದು ಅನ್ವಯವಾಗಲಿದೆ.
ಬ್ಯಾಂಕ್ ಗಳು ಚಕ್ರಬಡ್ಡಿಯನ್ನು ಮನ್ನಾ ಮಾಡಲಿವೆ. ಬಳಿಕ ಆ ಮೊತ್ತವನ್ನು ಸರಕಾರ ಬ್ಯಾಂಕ್ ಗಳಿಗೆ ಪಾವತಿ ಮಾಡಲಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ರೂ 6500 ಕೋಟಿ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಶಿಕ್ಷಣ, ಗೃಹ, ಗೃಹಬಳಕೆಯ ವಸ್ತುಗಳು, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ, ವೈಯುಕ್ತಿಕ ಹಾಗೂ ಉಪಭೋಗದ ಉದ್ದೇಶಕ್ಕೆ ಸಾಲ ಪಡೆದವರಿಗೆ ಮತ್ತು ಎಂಎಸ್ಎಂಇ ಗಳಿಗೆ ತುಸು ನೆಮ್ಮದಿ ದೊರೆತಂತಾಗಿದೆ. ಮಾರ್ಚ್ 1 ರಿಂದ ಆಗಸ್ಟ್ 31 ರವರೆಗೆ ಸಾಲದ ಕಂತು ಮರುಪಾವತಿ ಮುಂದೂಡಿಕೆ ಅವಧಿಕೆ ಇದು ಅನ್ವಯವಾಗಲಿದೆ. ಮುಂದೂಡಿಕೆಯ ಪ್ರಯೋಜನ ಪಡೆಯದೇ ಇರುವವರಿಗೂ ಇದರ ಲಾಭ ದೊರೆಯಲಿದೆ ಎಂದು ಕೇಂದ್ರ ಹೇಳಿದೆ.
Post a comment