ಕಾರ್ಕಳ,ಅ.10:ಸಮರ್ಪಕ ನಿರ್ವಹಣೆಯಿಲ್ಲದೆ ಕೆಲ ವಾರಗಳ ಹಿಂದೆ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ಮಂಗಳ ಪಾದೆಯಲ್ಲಿರುವ ಜೈನ ಬಿಂಬದ ಸುತ್ತಮುತ್ತ ಜೈನ ಬ್ರಿಗೇಡ್ ಸದಸ್ಯರು ಶನಿವಾರ ಸ್ವಚ್ಛತಾ ಕಾರ್ಯ ಹಾಗೂ ಸೂಚನಾ ಫಲಕ ಅಳವಡಿಸುವ ಕಾರ್ಯವನ್ನುನಡೆಸಿದರು.

ಈ ವೇಳೆಯಲ್ಲಿ ಜೈನ ಮಠದ ಸ್ವಾಮಿಜಿ ಸ್ವಸ್ತಿ ಶ್ರೀ ಭಾರತಭೂಷಣ ಡಾ.ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿ ಅವರು ಅಲ್ಲಿಗೆ ಭೇಟಿ ನೀಡಿ ಆಶೀರ್ವಚನ ನೀಡಿ, ಜೈನ್ ಬ್ರಿಗೇಡ್ ನ ಕಾರ್ಯವನ್ನು ಶ್ಲಾಘಿಸಿದರು. ಇದೇ ವೇಳೆ ಅವರು ಗಿಡ ನೆಡುವ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು.
Post a comment