ಜೆಇಇ ಪರೀಕ್ಷೆಯಲ್ಲಿ 99.8% ಗಳಿಸಿದ್ದ ಅಭ್ಯರ್ಥಿ ಬಂಧನ-Times Of Karkala

ಗುವಾಹಟಿ,ಅ.29: ಜೆಇಇ ಪರೀಕ್ಷೆಯಲ್ಲಿ ಶೇ.99.8 ರಷ್ಟು ಗಳಿಸಿದ್ದ ಅಭ್ಯರ್ಥಿ ತನ್ನ ಪರವಾಗಿ ಬೇರೆಯವರ ಮೂಲಕ ಪರೀಕ್ಷೆ ಬರೆಸಿದ್ದ ವಿಚಾರ ಬೆಳಕಿಗೆ ಬಂದಿದ್ದು ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.


ಸೆ.05 ರಂದು ಗುವಾಹಟಿ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಈ ಅಭ್ಯರ್ಥಿ ಹಾಜರಾಗದೆ ತನ್ನ ಪರವಾಗಿ ತನ್ನ ಸೋಗಿನಲ್ಲಿ ಬೇರೊಬ್ಬರನ್ನು ಕಳಿಸಿ ಪರೀಕ್ಷೆ ಬರೆಸಿ ಶೇ.99.8 ರಷ್ಟು ಅಂಕ ಗಳಿಸಿದ್ದ ಎಂದು ಮಿತ್ರದೇವ್ ಶರ್ಮಾ ಎಂಬುವರು ಅ.23 ರಂದು ದೂರು ದಾಖಲಿಸಿದ್ದಾರೆ. ಈ ಅಪರಾಧದಲ್ಲಿ ಶಾಮೀಲಾಗಿರುವ ವೈದ್ಯರಾಗಿರುವ ಅಭ್ಯರ್ಥಿಯ ತಂದೆ, ಹಾಗೂ ಮೂವರನ್ನು ಬಂಧಿಸಲಾಗಿದೆ. ಪೊಲೀಸರು ಒಟ್ಟು ಐವರನ್ನು ಬಂಧಿಸಿದ್ದಾರೆ.

ಈ ಅಭ್ಯರ್ಥಿಯು ಜೆಇಇ ಮೇನ್ಸ್‌ನಲ್ಲಿ ಶೇ.99.8 ರಷ್ಟು ಅಂಕ ಗಳಿಸಿದ್ದಾನೆ. ಅಭ್ಯರ್ಥಿ ತನ್ನ ಸ್ನೇಹಿತನೊಂದಿಗೆ ಮಾತನಾಡುವ ಸಂದರ್ಭದಲ್ಲಿ ಈ ಬಗ್ಗೆ ತಿಳಿಸಿರುವುದು ರೆಕಾರ್ಡ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಕೃತ್ಯದಲ್ಲಿ ಗುವಾಹಟಿಯ ಖಾಸಗಿ ಕೋಚಿಂಗ್ ಇನ್ಸ್ಟಿಟ್ಯೂಟ್ ಕೂಡ ಶಾಮೀಲಾಗಿದೆ ಎಂದು ಶಂಕಿಸಲಾಗಿದೆ.


ಜಾಹೀರಾತುhttps://www.timesofkarkala.in/2020/10/blog-post_8.html
 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget