ಸುಳ್ಯ,ಅ,8:ಭಾರತೀಯ ಕಬಡ್ಡಿ ತಂಡದ ಹಿರಿಯ ಸಂಭಾವ್ಯ ಆಟಗಾರರ ತಂಡದಲ್ಲಿ ರಾಜ್ಯದ ಏಕೈಕ ಆಟಗಾರ ಸುಳ್ಯದ ಸಚಿನ್ ಪ್ರತಾಪ್ ಅವರಿಗೆ ಅವಕಾಶ ಕಲ್ಪಿಸಲು ದಿಲ್ಲಿಯ ರಾಷ್ಟೀಯ ಕಬಡ್ಡಿ ಅಸೋಸಿಯೇಷನ್ ಅಧಿಕಾರಿಗಳು ಒಪ್ಪಿದ್ದಾರೆ.
ಈ ಹಿಂದೆ ಅವರನ್ನು ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತಾದರೂ, ಅನಂತರ ಆನ್ಲೈನ್ ತರಬೇತಿ ಶಿಬಿರದಿಂದ ಕೈ ಬಿಡಲಾಗಿತ್ತು. ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿಯಾಗಿರುವ ಸಚಿನ್ ಪ್ರತಾಪ್ ಅವರನ್ನು ತರಬೇತಿ ಪಟ್ಟಿಯಿಂದ ಕೈ ಬಿಟ್ಟಿದ್ದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಕೇಂದ್ರ ಸಚಿವ ಸದಾನಂದ ಗೌಡರು ಕಬಡ್ಡಿ ಅಸೋಸಿಯೇಷನ್ ಸಿಇಒ ಜತೆ ಚರ್ಚಿಸಿದ್ದು ಪೂರಕ ಸ್ಪಂದನೆ ವ್ಯಕ್ತವಾಗಿದ್ದು, ಆಟಗಾರನಿಗೆ ಹಾಗೂ ಕ್ರೀಡಾ ಪ್ರಿಯರಿಗೆ ಸಂತಸ ತಂದಿದೆ.
Post a comment