ಕಾಂತಾವರ:ಕಾಂತಾವರ ಗ್ರಾಮದ ಶ್ರೀಕಾಂತೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಾ ಕೋಟ್ಯಾನ್ ಇವರು ಈ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 96% ಅಂಕಗಳನ್ನು ಪಡೆದ ಉನ್ನತ ಸಾಧನೆಯನ್ನು ಗಮನಿಸಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಯೋಜನೆಯಾದ ನಮ್ಮೂರ ಹೆಮ್ಮೆ ಕಾರ್ಯಕ್ರಮದಡಿ NSUI ಇವರ ಮೂಲಕ ಕೊಡಮಾಡುವ ಸ್ವತಃ ಡಿ.ಕೆ. ಶಿವಕುಮಾರ್ ಅವರ ಹಸ್ತಾಕ್ಷರ ಇರುವ ಪ್ರಶಂಸಾ ಪತ್ರವನ್ನು ಕಾಂತಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಮುಂದಾಳತ್ವದಲ್ಲಿ ಗಾಂದಿ ಜಯಂತಿಯ ಸಂದರ್ಭದಲ್ಲಿ ರಕ್ಷಾ ಕೋಟ್ಯಾನ್ ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಂತಾವರ ಗ್ರಾಮದ ಕಾಂಗ್ರೆಸ್ ಮುಖಂಡರು ಪಂಚಾಯತಿ ಸದಸ್ಯರಾದ ಸಂದೀಪ್ ಅಡ್ಯಂತಾಯ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷರಾದ ಕುಶ.ಆರ್.ಮೂಲ್ಯ, ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಜಿಲ್ಲಾ ಸಂಚಾಲಕರಾದ ಯೋಗಿಶ್ ನಯನ್ ಇನ್ನಾ, ಅಮಿತ್ ಬೇಲಾಡಿ, ಪ್ರದೀಪ್ ಬೇಲಾಡಿ, ಉದಯ ಶೆಟ್ಟಿ, ಕರಣ್ ಶೆಟ್ಟಿ ಬೇಲಾಡಿ,ಸಂತೋಶ್ ಕುಲಾಲ್ ಬೇಲಾಡಿ,ಸಚಿನ್ ಬೇಲಾಡಿ,ಅಶೋಕ್ ಬೇಲಾಡಿ,ರಕ್ಷಿತ್ ಪೂಜಾರಿ ಬೇಲಾಡಿ,ದಿನೇಶ್ ಅಮೀನ್ ಗುಡ್ಡೆಯಂಗಡಿ ಉಪಸ್ಥಿತರಿದ್ದರು .ರಕ್ಷಾ ಕೋಟ್ಯಾನ್ ಇವರು ಕಾಂತಾವರ ಒಡ್ಡೊಟ್ಟು ಸಂಜೀವ ಕೋಟ್ಯಾನ್ ಹಾಗೂ ಶ್ರೀಮತಿ ರೇವತಿ ದಂಪತಿಗಳ ಸುಪುತ್ರಿಯಾಗಿದ್ದಾರೆ.
Post a comment