ಕೊರೊನ ವೇಳೆ ನೇರವಾದ ಕಾಪು ಪೊಲೀಸ್ ಗೆ ಮೊಮ್ಮಗನ ಮದುವೆಯಲ್ಲಿ ಅಜ್ಜಿಯಿಂದ ಸನ್ಮಾನ -Times Of Karkala

ಉಡುಪಿ,ಅ.31: ಕಾಪು ಪೊಲೀಸ್ ಠಾಣಾ  ಹೆಡ್ ಕಾನ್ಸ್ಟೇಬಲ್  ಸುಧಾಕರ ಭಂಡಾರಿ ಇವರು ಕೊರೊನ ಕಾರಣಕ್ಕಾಗಿ ಉಡುಪಿಯ ಟಿ ಎಂ ಎ ಪೈ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿದ್ದರು. 

ಅದೇ ವೇಳೆ ಸಾಸ್ತಾನದ ಎಡಬೆಟ್ಟು ಚೆಮ್ಪಿಯ ಗೋಪಾಲ ಆಚಾರ್ಯ ಕುಟುಂಬದ ಸದಸ್ಯರು ಅದೇ ಆಸ್ಪತ್ರೆಯಲ್ಲಿ ದಾಖಲಾಗಿ ಕುಟುಂಬದ ಎಲ್ಲ ಸದಸ್ಯರು ಗುಣಮುಖರಾಗುವ ವೇಳೆ ಗೋಪಾಲ ಆಚಾರ್ಯರ ತಾಯಿಯಾದ ಜಾನಕಿ ಆಚಾರ್ಯ (87) ಇನ್ನು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯುವಂತೆ ವೈದ್ಯರು ಹೇಳಿದಾಗ ಕಂಗಾಲಾದ ಗೋಪಾಲ್ ಆಚಾರ್ಯರಿಗೆ, ಮೂರು ದಿನಗಳ ಕಾಲ ತಾಯಿಯನ್ನು ತಾನು ನೋಡಿಕೊಳ್ಳುವುದಾಗಿ ಹೆಡ್ ಕಾನ್ಸ್ಟೇಬಲ್ ಸುಧಾಕರ ಭಂಡಾರಿ ಧೈರ್ಯ ಹೇಳಿದರು. ಮೂರು ದಿನಗಳ ಕಾಲ ಅವರೊಂದಿಗಿದ್ದು, ನಂತರ ಡಿಸ್ಚಾರ್ಜ್ ಮಾಡಿಸಿದರು. ಅವರನ್ನು ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹೊರಗೆ ಕರೆತಂದು ಮನೆಯವರಿಗೆ ಒಪ್ಪಿಸಿದರು. 

ಕಷ್ಟಕಾಲದಲ್ಲಿ ನೇರವಾದ ಹೆಡ್ ಕಾನ್ಸ್ಟೇಬಲ್ ಸುಧಾಕರ್  ಅವರನ್ನು ವೃದ್ದೆ ಜಾನಕಿಯವರು ನೆನಪಿನಲ್ಲಿಟ್ಟುಕೊಂಡು, 30/10/2020ರಂದು ನಡೆದಿದ್ದ ತಮ್ಮ ಮೊಮ್ಮಗ ನಿತೀಶ್ ಆಚಾರ್ಯರ ಮದುವೆಗೆ ಆಹ್ವಾನಿಸಿ,  ಸನ್ಮಾನಿಸಿ, ನೀನು ಕೂಡ ನನ್ನ ಮಗನೆ ಎಂದು ಹರಸಿದ್ದಾರೆ. 

 



https://www.timesofkarkala.in/2020/10/blog-post_8.html





Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget