ಕಾರ್ಕಳ ಬ್ಲಾಕ್ ಕಾಂಗ್ರೆಸ್:ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಜನುಮ ದಿನಾಚರಣೆ-Times of karkala

 ಕಾರ್ಕಳ ಬ್ಲಾಕ್ ಕಾಂಗ್ರೆಸ್:ಇಂದಿರಾಗಾಂಧಿ ಪುಣ್ಯತಿಥಿ ಆಚರಣೆ ಹಾಗು ಸರ್ದಾರ್ ವಲ್ಲಭಭಾಯ್ ಪಟೇಲ್ ಜನುಮ ದಿನಾಚರಣೆ  ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಮಾತನಾಡಿ,"ಇಂದಿರಾಗಾಂಧಿ ದೇಶಕ್ಕೆ ಕೊಟ್ಟ ಕೊಡುಗೆ ಹಾಗು ತುರ್ತುಪರಿಸ್ಥಿತಿ ಆ ಸಂದರ್ಭದಲ್ಲಿ ಯಾಕೆ  ಹೇರಲಾಯಿತು ಮತ್ತು ತುರ್ತುಪರಿಸ್ಥಿತಯಿಂದ ಬಡಜನತೆಗೆ ಹಾಗು ದೇಶಕ್ಕೇನು ಲಾಭವಾಯಿತು ಎಂಬುದನ್ನು ವಿವರಿಸಿ ಹಾಗೆಯೇ ಸಂಘಪರಿವಾರ ಆಗಲೂ ಈಗಲೂ ಇಂದಿರಾಗಾಂಧಿಯವರ  ಬಗ್ಗೆ ಹೇಗೆ ಅಪಪ್ರಚಾರ ಮಾಡುವ ಮೂಲಕ ತುರ್ತುಪರಿಸ್ಥಿತಿಯ ಕಪ್ಪುಚುಕ್ಕೆಯನ್ನಿಟ್ಟಿದ್ದಾರೆ. ಆ ಕಪ್ಪುಚುಕ್ಕೆಯನ್ನಳಿಸುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರಿಂದಾಗಬೇಕೆಂದು ಹೇಳಿದರು. 



ದೇಶೀಯ ಸಂಸ್ಥಾನಗಳನ್ನು ಒಗ್ಗೂಡಿಸಿ ದೇಶದ ಆಡಳಿತದೊಳಗಡೆ ಸೇರಿಸಿದ ವಲ್ಲಭ ಬಾಯ್ ಪಟೇಲರ ನಿರ್ಭಿಡೆಯ ನಿರ್ಧಾರ ಅವರನ್ನು ಒಬ್ಬ ಉಕ್ಕಿನ ಮನುಷ್ಯನನ್ನಾಗಿಸಿತ್ತು ಎಂದರು.
ವಕ್ತಾರ ಬಿಪಿನ ಚಂದ್ರಪಾಲ್ ನಕ್ರೆ,  ಪ್ರಧಾನ ಕಾರ್ಯದರ್ಶಿ ಜೋಜ್೯ ಕ್ಯಾಸ್ತಲೀನೋ, ಸುಷ್ಮಾ ಹಾಗೂ ಇತರ ಗಣ್ಯರು ಸಂದರ್ಭೋಚಿತವಾಗಿ ಮಾತಾಡಿದರು.


ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಸದಸ್ಯ ಸಿರಿಯಣ್ಣ ಶೆಟ್ಟಿ, ರಾಜ್ಯ ಯುವ  ಕಾರ್ಯದರ್ಶಿ ರವಿಶಂಕರ ಸೇರ್ವೆಗಾರ್, ಬ್ಲಾಕ್ ಉಪಾಧ್ಯಕ್ಷ ದಯಾನಂದ ಬಂಗೇರ,ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಮಹಿಳಾಧ್ಯಕ್ಷೆ ನಳಿನಿ ಆಚಾರ್ಯ, ಹಿಂದುಳಿದ ವರ್ಗದ ಅಧ್ಯಕ್ಷ ಕುಶ ಮೂಲ್ಯ, ಜಿಲ್ಲಾ ಅ ಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ  ಆರೀಫ್ ಕಲ್ಲೊಟ್ಟೆ, ಎಸ್ಸಿ ಘಟಕದ ಅಧ್ಯಕ್ಷ ಅಣ್ಣಪ್ಪ ನಕ್ರೆ, ಐಟಿ ಸೆಲ್ ಸತೀಷ್ ಕಾರ್ಕಳ, ನಗರ ಮಹಿಳಾಧ್ಯಕ್ಷೆ ಕಾಂತಿ ಶೆಟ್ಟಿ, ಪುರಸಭಾ ಸದಸ್ಯರಾದ ಶುಭದಾ ರಾವ್, ಸೋಮು, ಪ್ರತಿಮಾ, ಹರೀಷ್ ದೇವಾಡಿಗ, ಪ್ರಭಾ, ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಸ್ವಾಗತಿಸಿದರು. ಸುಶಾಂತ್ ಸುಧಾಕರ್ ಪ್ರಸ್ತಾವನೆ ಗೈದು ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆ ಗೈದರು.


 



https://www.timesofkarkala.in/2020/10/blog-post_8.html






Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget