ಕಾರ್ಕಳ ಪುರಸಭೆಯ ನೂತನ ಅಧ್ಯಕ್ಷರಾಗಿ ಸುಮಾಕೇಶವ್ ಹಾಗೂ ಉಪಾಧ್ಯಕ್ಷರಾಗಿ ಪೂರ್ಣಿಮಾ ಪಲ್ಲವಿ ಆಯ್ಕೆಯಾಗಿದ್ದಾರೆ.
23 ಸದಸ್ಯರನ್ನು ಹೊಂದಿದ್ದ ಕಾರ್ಕಳ ಪುರಸಭೆಯಲ್ಲಿ 11 ಬಿಜೆಪಿ 11 ಕಾಂಗ್ರೆಸ್ ಹಾಗೂ 1 ಪಕ್ಷೇತರ ಸದಸ್ಯರಿದ್ದು ಎರಡೂ ಪಕ್ಷಗಳು ಸಮಬಲವನ್ನು ಹೊಂದಿತ್ತು.ಸರಕಾರದಿಂದ ಪ್ರಕಟಗೊಂಡ ಮೀಸಲಾತಿ ಪಟ್ಟಿಯ ಗೊಂದಲದಿಂದಾಗಿ ಸ್ಥಳೀಯ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರು.ಶಾಸಕರು ಹಾಗೂ ಸಂಸದರ ಮತ ಗಣನೆಗೆ ತೆಗೆದುಕೊಳ್ಳುವುದರಿಂದ ಪುರಸಭೆ ಬಿಜೆಪಿ ಪಾಲಾಗಿದೆ.ಚುನಾವಣೆ ನಡೆದು ಎರಡು ವರ್ಷಗಳ ಬಳಿಕ ಇದೀಗ ಆಯ್ಕೆ ಪ್ರಕ್ರಿಯೆ ನಡೆದಿದೆ.
ಸುಮಾ ಕೇಶವ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿತ್ತು.ಬಿಜೆಪಿಯಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿ ಸಕ್ರಿಯರಾಗಿದ್ದವರು.ಕಾರ್ಕಳ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ,ಬಿಜೆಪಿಯ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದಶಿಯಾಗಿಯೂ ಇವರು ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
Post a comment