ಕಾರ್ಕಳ: ನದಿ ತೀರದಲ್ಲಿ ಸ್ವರ್ಣರಾಧನಾ ಕಾರ್ಯಕ್ರಮ-Times Of Karkala

ಕಾರ್ಕಳ,ಅ.30:ಸ್ವಚ್ಛ ಕಾರ್ಕಳ ಬ್ರಿಗೇಡ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್  ಸ್ಥಳೀಯ ಸಂಸ್ಥೆ ಕಾರ್ಕಳ ಹಾಗೂ ಕಾರ್ಕಳ ವಲಯದ ರೋವರ್ಸ್ ಅಂಡ್ ರೇಂಜರ್ಸ್, ಯುವವಾಹಿನಿ ಕಾರ್ಕಳ ಘಟಕ , ರೋಟರಿ ಆನ್ಸ್ ಕ್ಲಬ್, ರೋಟರಾಕ್ಟ್ ಕ್ಲಬ್ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಕಾರ್ಕಳದ ಸ್ವರ್ಣ ನದಿಗೆ ಸಂಬಂಧಿಸಿ  'ಸ್ವರ್ಣರಾಧನಾ  ಕಾರ್ಯಕ್ರಮ' ಸಾಣೂರು ಮಠದಕೆರೆ ಬಳಿ ಭಾನುವಾರದಂದು(ನವೆಂಬರ್ 1) ಬೆಳಿಗ್ಗೆ 7:30ಕ್ಕೆ ಜರುಗಲಿದೆ. 


ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಕೇಶವ ಹಾಗೂ ಉಪಾಧ್ಯಕ್ಷೆ ಪಲ್ಲವಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. 

ಡಾ ನಾರಾಯಣ ಶೆಣೈ ,ಪ್ರಾಧ್ಯಾಪಕರು, ಎಂ ಐ ಟಿ ಮಣಿಪಾಲ ಕಾರ್ಯಕ್ರಮದ ಗೌರವಾಧ್ಯಕ್ಷತೆ ವಹಿಸಲಿದ್ದಾರೆ.ವೆಂಟರಮಣ ಪ್ರಸಾದ್, ಪ್ರಾಧ್ಯಾಪಕರು, ನಿಟ್ಟೆ  ಡಿಪ್ಲೋಮ ಪಾಲಿಟೆಕ್ನಿಕ್, ಫೆಲಿಕ್ಸ್, ಸದಸ್ಯರು ಸ್ವಚ್ಛ ಕಾರ್ಕಳ ಬ್ರಿಗೇಡ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 


 

https://www.timesofkarkala.in/2020/10/blog-post_8.htmlLabels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget