ಕಾರ್ಕಳ ಶ್ರೀ ಭೈರಾದೇವಿ ಜಿನೇಂದ್ರ ಬಸದಿಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

 ಕಾರ್ಕಳ,ಅ.30:ಧಾರ್ಮಿಕ ಘಟಕಗಳಿಗೆ ನೀಡುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಕರ್ನಾಟಕ ಸರಕಾರ ಅಲ್ಪಸಂಖ್ಯಾತ ಇಲಾಖೆ ವತಿಯಿಂದ ಪ್ರಥಮವಾಗಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶ್ರೀ ಭೈರಾದೇವಿ  ಜಿನೇಂದ್ರ ಬಸದಿಗೆ ಅಕ್ಟೋಬರ್ 19ರಂದು  ಹಸ್ತಾಂತರ ಮಾಡಲಾಯಿತು. 


ಕರ್ನಾಟಕ ಸರ್ಕಾರದ ಅಲ್ಪ ಸಂಖ್ಯಾತ ಕಲ್ಯಾಣ  ಇಲಾಖೆಯ ಜಿಲ್ಲಾ ಅಧಿಕಾರಿ  ದಯಾನಂದ  ಪಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಬಸದಿಯ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. 

ಕರ್ನಾಟಕ ಜೈನ ಸ್ವಯಂ ಸೇವಾ  ಚಾರಿಟೇಬಲ್ ಟ್ರಸ್ಟ್ ನ ನೇಮಿರಾಜ ಅರಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಲ್ಪ ಸಂಖ್ಯಾತ   ಕಲ್ಯಾಣ ಇಲಾಖೆಯ ಕುಂದಾಪುರ ಉಪ ವಿಭಾಗದ ತಾಲೂಕು ವಿಸ್ತರಣಾಧಿಕಾರಿ ಸುಜಾತ ವಿ, ಅಲ್ಪ ಸಂಖ್ಯಾತ  ಕಲ್ಯಾಣ ಇಲಾಖೆಯ ಅಜಯ್ ಡಿ ಸೋಜಾ, ಕಾರ್ಕಳ ಜೈನ ಮಿಲನ್ ಅಧ್ಯಕ್ಷ ಅಮರ್ ನಾಥ ಪ್ರಸಾದ್, ಶ್ರೀ ಕರ್ನಾಟಕ ಜೈನ ಪುರೋಹಿತ ಜೈನ ಸಂಘದ ಕಾರ್ಯದರ್ಶಿ ಜ್ಞಾನಚಂದ್ರ ಇಂದ್ರ ಹಾಗೂ ಸರ್ವ ಸದಸ್ಯರು, ಜಿನವಾಣಿ ಮಹಿಳಾ ಸಮಾಜದ ಅಧ್ಯಕ್ಷೆ  ಕಿರಣ್ ಉದಯ್ ಕುಮಾರ್ ಉಪಸ್ಥಿತರಿದ್ದರು. ಶುದ್ಧ ಕುಡಿಯುವ ನೀರಿನ ಘಟಕವನ್ನು ಬೆಂಗಳೂರಿನ ಕಿಯೋನಿಕ್ಸ್  ಕಂಪನಿಯವರು ಅಳವಡಿಸಿದ್ದು, ಇಲ್ಲಿ ಸದಾ ನೀರು, ಬಿಸಿ ನೀರು ಹಾಗೂ ಶೀತಲ ನೀರು ಪೂರೈಕ್ಕೆಯಾಗುತ್ತದೆ. 


ಉಡುಪಿ ಜಿಲ್ಲೆಯಲ್ಲಿರುವ ಒಟ್ಟು 45 ಬಸದಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕದ ಯೋಜನೆಯನ್ನು ಅಳವಡಿಸಲು ಕರ್ನಾಟಕ ಅಲ್ಪಸಂಖ್ಯಾತ ಇಲಾಖೆಗೆ  ಅರ್ಜಿ ಸಲ್ಲಿಸಲಾಗಿದ್ದು, ಅದರಲ್ಲಿ 20 ಬಸದಿಗಳಿಗೆ ಮಂಜೂರಾಗಿದೆ. ಇಲಾಖೆಯ ಸಹಕಾರ ಮುಂದಿನ ದಿನಗಳಲ್ಲಿಯೂ ಹೀಗೆ ಮುಂದಿವರಿಯುತ್ತಿರಬೇಕು ಹಾಗೂ ಉಳಿದ 25 ಬಸದಿಗಳಿಗೂ ಈ ಘಟಕವನ್ನು ಒದಗಿಸಿ ಕೊಡಬೇಕೆಂದು ಜೈನ ಸಮುದಾಯದ ವತಿಯಿಂದ ಮನವಿ ಮಾಡಲಾಯಿತು. 

ದಕ್ಷಿಣ ಕನ್ನಡ ಜೈನ ಯುವಸಂಘದ ಅಧ್ಯಕ್ಷ ಎಸ್ ಪಾರ್ಶ್ವನಾಥವರ್ಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. 


 

https://www.timesofkarkala.in/2020/10/blog-post_8.html


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget