ಕಾರ್ಕಳ,ಅ,5:ಕೊರೋನಾ ಬಂದ ಹಿನ್ನೆಲೆಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿಡಿಯೋಗ್ರಾಫರ್ ಪ್ರಸನ್ನ(೪೫) ಅವರ ಮೃತದೇಹವನ್ನು ಸಾಮಾಜಿಕ ಕಾರ್ಯಕರ್ತ ಮುಲ್ಕಿಯ ಆಸೀಫ್ ಆಪದ್ಬಂಧವ ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಮೃತ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದ್ದರಿಂದಾಗಿ ಶವವವನ್ನು ಮೇಲೆತ್ತುವುದು ಸ್ಥಳೀಯರಿಗೆ ದುಸ್ತರದ ಕಾರ್ಯವಾಗಿತ್ತು. ಅಧಿಕಾರಿಗಳಿಗಾಗಲಿ, ಪೊಲೀಸ್, ಅಗ್ನಿಶಾಮಕದವರಿಗಾಗಲಿ ಈ ಬಗ್ಗೆ ಯಾವುದೇ ತಂತ್ರ ತಿಳಿದಿರಲಿಲ್ಲ. ಆಸೀಫ್ ಆಪದ್ಬಂಧವ ಅವರಿಗೆ ಕಾರ್ಕಳ ತಹಶೀಲ್ದಾರರಾದ ಪುರಂದರ ಹೆಗ್ಡೆ ಫೋನ್ ಮಾಡಿ ಮುಲ್ಕಿಯಿಂದ ಕರೆಯಿಸಿಕೊಂಡರು.
ಕಾರ್ಕಳಕ್ಕೆ ಆಗಮಿಸಿ ನಂತರ ಸೊಂಟಕ್ಕೆ ಹಗ್ಗ ಕಟ್ಟಿ ಬಾವಿಗಿಳಿದು ಹದಿನೈದು ನಿಮಿಷಗಳಲ್ಲಿ ಆಸೀಫ್ ಶವವನ್ನು ಮೇಲೆಕ್ಕೆತ್ತಿದ್ದಾರೆ.
Post a comment