ಕಾರ್ಕಳ: ರೋಟರಿ ಆನ್ಸ್ & ರೋಟರ್ಯಾಕ್ಟ್ ಕ್ಲಬ್ ವತಿಯಿಂದ ಪೈಪ್ ಕಾಂಪೋಸ್ಟ್ ಪದ್ದತಿಯ ಬಗ್ಗೆ ಅರಿವು-Times Of Karkala

ಕಾರ್ಕಳ,ಅ.20:ಮನೆಯ ತ್ಯಾಜ್ಯವನ್ನು, ಮನೆಯಂಗಳದಲ್ಲೇ ಸುಲಭವಾಗಿ ಕರಗಿಸಿ, ಉತ್ಕೃಷ್ಟ ಗೊಬ್ಬರ ತಯಾರಿಸುವ ‘ಪೈಪ್‌ ಕಾಂಪೋಸ್ಟ್‌’ ಎಂಬ ಪದ್ಧತಿಯೊಂದು ಇದೀಗ ಕಾರ್ಕಳ ದಲ್ಲಿ ಸದ್ದು ಮಾಡುತ್ತಿದೆ. ಪುರಸಭೆ ವ್ಯಾಪ್ತಿಯ ಮನೆಗಳ ತ್ಯಾಜ್ಯ ನಿರ್ವಹಣೆ ಗೆ ಕಾರ್ಕಳ ಪುರಸಭೆ ಹಾಗೂ ರೋಟರಿ ಆನ್ಸ್ & ರೋಟರ್ಯಾಕ್ಟ್ ಕ್ಲಬ್ ನ ಜಂಟಿ ಆಶ್ರಯ ದಲ್ಲಿ ನಡೆಯುತಿದೆ. ಈ ಸಂಸ್ಥೆಗಳು  ಪುರಸಭೆ ವ್ಯಾಪ್ತಿಯ ಮನೆಗಳು ಸೇರಿದಂತೆ ಎಲ್ಲ ಸ್ಥಳೀಯ ಆಯ್ದ ಮನೆಗಳಿಗೆ ಈ ವ್ಯವಸ್ಥೆಯನ್ನು ಮಾಡುತ್ತಿವೆ. ಅಲ್ಲದೆ  ಸಾರ್ವಜನಿಕರಲ್ಲಿ ಈ ವಿಷಯದ ಬಗ್ಗೆ ಸಾಕಷ್ಟು ಅರಿವು ಮೂಡಿಸುತ್ತಿವೆ. ಈ ಕಾರ್ಯಕ್ರಮದ ಚಾಲನೆಯನ್ನು ಕಾರ್ಕಳ ಪುರಸಭಾ ಪರಿಸರ ಅಭಿಯoತರ ಅಧಿಕಾರಿ ಆಗಿರುವ ಮದನ್.ಕೆ ಹಾಗೂ ಸ್ಯಾನಿಟೈಸರ್ ಸೂಪರ್ವೈಸರ್ ಆಗಿರುವ ಸುದೇಶ್ ಇವರು ಸೋಮವಾರ ಶಿರಡಿ ಕಾಲೇಜಿನಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರಮೀತ ಶೈಲೇಂದ್ರ ರಾವ್, ಕಾರ್ಯದರ್ಶಿ ಸುಮಾ ನಾಯಕ್, ರೋಟರ್ಯಾಕ್ಟ್ ಸಂಸ್ಥೆಯ ಕಾರ್ಯದರ್ಶಿ ಸಮೀರ್ ಹೆಗಡೆ ಹಾಗೂ ಶಿರಡಿ ಸಾಯಿ ಕಾಲೇಜಿನ ಸ್ಥಾಪಕರು, ದೇವಸ್ಥಾನದ ಮುಕ್ತೇಶ್ವರ  ಆಗಿರುವ ಚಂದ್ರಹಾಸ ಸುವರ್ಣ ಏಳನೇ ವಾರ್ಡ್ ಕೌನ್ಸಿಲರ್ ಮಮತಾ ಪೂಜಾರಿ , ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಮಮತಾ, 7ನೇ ವಾರ್ಡಿನ ಬಿಜೆಪಿ ಅಧ್ಯಕ್ಷರು ಆಗಿರುವ ಪ್ರಸಾದ್ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಜಾಹೀರಾತು
https://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget