ಹೊಸ್ಮಾರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ KIOCL ನಿಂದ ಶೌಚಾಲಯ ಕೊಡುಗೆ

ಹೊಸ್ಮಾರು, ಅ.10: ಕರ್ನಾಟಕ ಪಬ್ಲಿಕ್ ಸ್ಕೂಲ್ ಹೊಸ್ಮಾರು ಇಲ್ಲಿಗೆ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ( KIOCL) ಸುಸಜ್ಜಿತವಾದ ಬಾಲಕಿಯರ ಶೌಚಾಲಯವನ್ನು ಕೊಡುಗೆಯಾಗಿ ನೀಡಿದೆ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಶ್ರೀ ಭಾಸ್ಕರ ರೆಡ್ಡಿ, ನಿರ್ದೇಶಕರು, ಉತ್ಪಾದನೆ ಮತ್ತು ಯೋಜನೆ  KIOCL ಬೆಂಗಳೂರು ಕಟ್ಟಡವನ್ನು ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು. 
 ಶ್ರೀನಿವಾಸ್  ಭಟ್, ಮಹಾ ಪ್ರಬಂಧಕರು ಕೆಐಒಸಿಎಲ್ ಮಂಗಳೂರು,ಶ್ರೀ ಮನೋಹರ್ ಡಿಜಿಎಂ ಮಂಗಳೂರು ಇವರು ಉಪಸ್ಥಿತರಿದ್ದರು. ಇಂಜಿನಿಯರ್ ಮನೋಹರ್ ಹಾಗೂ ಗುತ್ತಿಗೆದಾರರಾದ ನಾರಾಯಣ ಸುವರ್ಣ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಪ ಪ್ರಾಂಶುಪಾಲರಾದ ದಿವಾಕರ ಹೆಗ್ಡೆ ಇವರು ಸ್ವಾಗತಿಸಿ ಪ್ರಸ್ತಾವಿಸಿದ್ದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಪ್ರಭಾವತಿ ಶಾಲೆಯ ವತಿಯಿಂದ ಸಂಸ್ಥೆಗೆ ನೆನಪಿನ ಕಾಣಿಕೆಯನ್ನು ನೀಡಿದರು.
ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ, ಮಾಜಿ ಪಂಚಾಯತ್ ಅಧ್ಯಕ್ಷ ಪುರುಷೋತ್ತಮ ರಾವ್, ಎ.ಪಿ.ಎಂ.ಸಿ ಸದಸ್ಯರಾದ ಜಯವರ್ಮ ಜೈನ್, ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣ ಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸುಜಯ, ಸದಾನಂದ ಪೂಜಾರಿ ಹಾಗೂ ಶಿಕ್ಷಕ ವೃಂದದವರು ಸಭೆಯಲ್ಲಿ ಭಾಗವಹಿಸಿದ್ದರು. 


ಜಾಹೀರಾತು
https://www.timesofkarkala.in/2020/10/blog-post_8.html
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget