ಹೆಬ್ರಿ : ಹೆಬ್ರಿ ಜೇಸಿಐ ಘಟಕದ ಪೂರ್ವಾಧ್ಯಕ್ಷರಾದ ವಕೀಲ ಸಮಾಜಸೇವಕ ಕೆ.ಕೃಷ್ಣ ಶೆಟ್ಟಿ ಅವರಿಗೆ ಜೇಸಿಐ ವತಿಯಿಂದ ನೀಡುವ 2020ನೇ ಸಾಲಿನ ಜೇಸಿಐ ಸಾಧನಾಶ್ರೀ ಪ್ರಶಸ್ತಿ ಲಭಿಸಿದ್ದು ಪುತ್ತೂರಿನಲ್ಲಿ ಇತ್ತೀಚೆಗೆ ಪ್ರಧಾನ ಮಾಡಲಾಯಿತು.

2000ದಲ್ಲಿ ಹೆಬ್ರಿ ಜೇಸಿಐ ಘಟಕಕ್ಕೆ ಸೇರಿದ ಕೃಷ್ಣ ಶೆಟ್ಟಿ ಅವರು 2001ರಲ್ಲಿ ಘಟಕಾಧ್ಯಕ್ಷರಾದರು.ಜೇಸಿಐಯಲ್ಲಿ ಸಕ್ರಿಯರಾಗಿ ಎಚ್ಜಿಎಫ್ ಪುರಸ್ಕಾರ ಪಡೆದರು. ವಿಶೇಷವಾದ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮವನ್ನು ತನ್ನ ಮನೆಯಲ್ಲೇ ಮಾಡಿ ಎಲ್ಲರ ಪ್ರಶಂಸೆ ಪಾತ್ರರಾಗಿದ್ದರು. ಬಳಿಕ 2016ರಲ್ಲಿ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಸೇರಿದ ಅವರು 2019ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಲಯನ್ಸ್ ಗ್ರಾಮೀಣ ಶಿಕ್ಷಣ ವಿಭಾಗದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1993ರಲ್ಲಿ ಕಾರ್ಕಳದಲ್ಲಿ ವಕೀಲ ವೃತ್ತಿಗೆ ಸೇರಿ ವಕೀಲಿ ವೃತ್ತಿಯನ್ನು ಸೇವೆ ಎಂದು ಪರಗಣಿಸಿ ಬಡ ಜನತೆಗೆ ಸೇವೆಯನ್ನು ನೀಡುತ್ತ ಬಂದಿದ್ದಾರೆ. ಸಾಮಾಜಿಕ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಕೃಷ್ಣ ಶೆಟ್ಟಿಯವರು ಸಕ್ರೀಯರಾಗಿದ್ದಾರೆ. ಜೇಸಿರೆಟ್ ಪೂರ್ವಾಧ್ಯಕ್ಷೆಯಾದ ಪತ್ನಿ ಜ್ಯೋತಿ ಕೆ. ಶೆಟ್ಟಿ, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಉದ್ಯೋಗಿ ಮತ್ತು ಮಗಳು ಕೃತಿ ಕೆ.ಶೆಟ್ಟಿ ಅವರೊಂದಿಗೆ ಕೃಷ್ಣ ಶೆಟ್ಟಿಯವರದು ಸಂತಸದ ಕುಟುಂಬ. ಹೆಬ್ರಿ ಜೇಸಿಐ ಅಧ್ಯಕ್ಷ ಸುನೀತಾ ಅರುಣ್ ಕುಮಾರ್ ಹೆಗ್ಡೆ, ಪೂರ್ವಾಧ್ಯಕ್ಷ ಬೇಳಂಜೆ ಹರೀಶ ಪೂಜಾರಿ, ಜೇಸಿರೆಟ್ ಪೂರ್ವಾಧ್ಯಕ್ಷೆ ಸುಜಾತ ಹರೀಶ ಪೂಜಾರಿ, ಜೇಸಿಐ ಪ್ರಮುಖರು ಉಪಸ್ಥಿತರಿದ್ದರು.
Post a comment