ರಾಜ್ಯದ ಎರಡನೇ ಅತೀ ದೊಡ್ಡ ದಸರಾ ಮಂಗಳೂರು ದಸರಾ ಉತ್ಸವಕ್ಕೆ ತೆರೆ-Times of karkala

ರಾಜ್ಯದಲ್ಲೇ ಮೈಸೂರು ಬಳಿಕ ಎರಡನೇ ಅತೀ ದೊಡ್ಡ ದಸರಾ ಎಂದು ಕರೆಸಿಕೊಳ್ಳುವ ಮಂಗಳೂರು ದಸರಾ ಉತ್ಸವಕ್ಕೆ ತೆರೆ ಬಿದ್ದಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಕ್ಷೇತ್ರದಲ್ಲಿ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಿತು. ಕೋವಿಡ್ ಗೈಡ್‍ಲೈನ್ಸ್ ಪ್ರಕಾರ ಅತ್ಯಂತ ಸರಳವಾಗಿ ಈ ಬಾರಿ ದಸರಾ ಉತ್ಸವ ನೆರವೇರಿತು.ಅತ್ಯಂತ ವೈಭವದಿಂದ ನಡೆಯುತ್ತಿದ್ದ ಮಂಗಳೂರು ದಸರಾ ಈ ಬಾರಿ ಸರಳವಾಗಿ ನಡೆದಿದೆ. ಕುದ್ರೋಳಿ ದೇವಸ್ಥಾನದ ಆವರಣಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಮಹೋತ್ಸವಕ್ಕೆ ತಡರಾತ್ರಿ ತೆರೆಬಿದ್ದಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಕ್ಷೇತ್ರದಲ್ಲಿ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಿತು.


ಈ ಹಿಂದಿನ ವರ್ಷಗಳಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯುತ್ತಿತ್ತು. ರಾತ್ರಿ ಪೂರ್ತಿ ಅದ್ದೂರಿ ಟ್ಯಾಬ್ಲೋ ಮೂಲಕ ನಗರ ಪ್ರದಕ್ಷಿಣೆ ಮಾಡಿ ಮುಂಜಾನೆ ವೇಳೆಗೆ ದೇವಳದ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಮೆರವಣಿಗೆಯನ್ನು ರದ್ದುಗೊಳಿಸಲಾಗಿತ್ತು. ದೇವಸ್ಥಾನದಲ್ಲೇ ವಿಸರ್ಜನಾ ಪೂಜೆ ನೆರವೇರಿಸಿ ಹೊರಾಂಗಣದಲ್ಲೇ ಪ್ರದಕ್ಷಿಣೆ ಹಾಕಿ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.


ಈ ಬಾರಿ ಕರೊನಾ ಕಾರಣದಿಂದ ಹುಲಿ ಕುಣಿತವೂ ಕೇವಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತು. ಜಿಲ್ಲಾಡಳಿತ ಒಂದಿಷ್ಟು ನಿರ್ಬಂಧಗಳನ್ನು ವಿಧಿಸಿತ್ತು. ಹುಲಿ ವೇಷ ತಂಡಗಳಿಗೆ ಮನೆ ಮನೆ ತೆರಳುವುದಕ್ಕೆ ಈ ಬಾರಿ ಅವಕಾಶ ಇರಲಿಲ್ಲ. ಹೀಗಾಗಿ ನವರಾತ್ರಿ ಉತ್ಸವ ನಡೆಯುವ ದೇವಸ್ಥಾನಗಳಲ್ಲಿ ಹುಲಿ ಕುಣಿತಕ್ಕೆ ಅವಕಾಶ ನೀಡಲಾಗಿತ್ತು. ಕರೊನಾ ಮಾಹಮಾರಿ ಊರು ಬಿಟ್ಟು ತೊಲಗಲಿ ಎಂದು ಹರಕೆಯ ಹುಲಿವೇಷ ಹಾಕಿದ್ದರು.


ಒಟ್ಟಿನಲ್ಲಿ ಕೊರೊನಾ ಹಿನ್ನಲೆಯಲ್ಲಿ ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಈ ಬಾರಿಯ ಮಂಗಳೂರು ದಸರಾ ಉತ್ಸವ ನಡೆಯಿತು. ಸಾಂಪ್ರದಾಯಿಕ ಆಚರಣೆಗಳಿಗೆ ಚ್ಯುತಿ ಬಾರದಂತೆ, ಭಕ್ತರಿಗೂ ನೋವುಂಟಾಗದಂತೆ ನವರಾತ್ರಿ ಸಂಪನ್ನಗೊಂಡಿತು.


ಜಾಹೀರಾತುhttps://www.timesofkarkala.in/2020/10/blog-post_8.html

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget