ಸಹಾಯದ ನಿರೀಕ್ಷೆಯಲ್ಲಿ ವಿಕಲಚೇತನ ದಂಪತಿ-Times Of Karkala

ಕಾರ್ಕಳ,ಅ, 11: ಸ್ಥಳೀಯ ವಿಕಲಚೇತನರ  ಕುಟುಂಬವೊಂದು ನೆರವಿಗಾಗಿ ಎದುರು ನೋಡುತ್ತಿದೆ. ಮಾಳ ಗ್ರಾಮದ ಹುಕ್ರಟ್ಟೆ ನಿವಾಸಿಗಳಾದ ರೇವತಿ ಹಾಗು ಲಕ್ಷ್ಮಣ್ ನಾಯಕ್ ದಂಪತಿ ಹಾಗೂ ಅವರ ಹೆಣ್ಣು ಮಗುವಿಗೆ  ಬದುಕೊಂದು ನರಕಯಾತನೆ. ರೇವತಿ ಮೂಲ್ಯ  13 ನೇ ವಯಸ್ಸಿನಿಂದ  ದೃಷ್ಟಿ ಚೇತನೆ. ಲಕ್ಷ್ಮಣ್ ನಾಯಕ್ ಹುಟ್ಟಿನಿಂದಲೇ ವಿಶೇಷ ಚೇತನ. ಇವರಿಬ್ಬರದೂ ಅಂತರ್ಜಾತಿ ವಿವಾಹ. 


ಸಹೋದರರ ಕಿರುಕುಳದ ನಡುವೆ ತನಗೆ ಯಾರ ಜತೆಗಾದರೂ  ಮದುವೆ ಮಾಡಿ ಮುಕ್ತಿ ನೀಡಿ ಎಂದು ಅಂಗಲಾಚಿದ ಪರಿಣಾಮ ಆಕೆಯ ಸಹೋದರರು ಹುಟ್ಟು ಅಂಗವಿಕಲ ಲಕ್ಷ್ಮಣ್ ಜತೆ ಆರು ವರ್ಷದ ಹಿಂದೆ   ಮದುವೆ ಮಾಡಿದರು. ಇತ್ತ ಲಕ್ಷ್ಮಣ್ ನಾಯಕ್ ಅವರಿಗೂ ತನ್ನವರೆಂದು ಯಾರೂ ಇಲ್ಲ. ಸದ್ಯ ದಂಪತಿಗಳು ಬೆಳ್ತಂಗಡಿ ತಾಲೂಕಿನ ನಾರಾವಿಯ ಡೊಂಕುಬೆಟ್ಟು ಎಂಬಲ್ಲಿ ಸರಕಾರಿ ಜಾಗದಲ್ಲಿ ಸ್ಥಳೀಯರ ನೆರವಿನಿಂದ ಸಣ್ಣ ಗುಡಿಸಲು ಕಟ್ಟಿಕೊಂಡು ಕಷ್ಟದ ಜೀವನ ನಡೆಸುತ್ತಿದ್ದಾರೆ. ದಂಪತಿಗೆ ತಲಾ 1400 ರೂ ಮಾಸಿಕ ವೇತನವಷ್ಟೇ ಬರುತ್ತಿದ್ದು, ಬೇರಾವ ಆದಾಯ ಮೂಲವೂ ಇಲ್ಲ. ಲಕ್ಷ್ಮಣ್ ನಾಯಕ್ ತೆವಳಿಕೊಂಡೇ ದೈನಂದಿನ ಕೆಲಸ ಮಾಡಬೇಕಿದೆ. ಇದರ ನಡುವೆ ಪುಟ್ಟ ಮಗುವಿನ ಲಾಲನೆ ಪಾಲನೆಯನ್ನೂ ತಂದೆಯೇ ಮಾಡಬೇಕಿದೆ. 
ಸ್ಥಳೀಯ ಸಮಾಜ ಸೇವಕ ಸಂಪತ್ ಜೈನ ದಂಪತಿಗಳ ಭವಿಷ್ಯಕ್ಕೆ ಏನಾದರು ವ್ಯವಸ್ಥೆ ಆಗಬೇಕೆಂದು ಬಹಳ ಪ್ರಯತ್ನಿಸುತ್ತಿದ್ದಾರೆ. ಇವರ ಕಷ್ಟದ ಬದುಕಿಗೆ ದಾನಿಗಳ ನೆರವಿನ ಹಸ್ತ ಬೇಕಿದೆ.
ವಿಳಾಸ:ಹೆಸರು: ರೇವತಿ, ಡೊಂಕುಬೆಟ್ಟು ಮನೆ, ನಾರಾವಿ, ಬೆಳ್ತಂಗಡಿ ತಾಲೂಕು,ಮೊಬೈಲ್: 9880618764
UNION BANK OF INDIA(CORPORATION BANK)
bank account:520101014602780
IFSC Code:CORP0003455
Naravi branch


ಜಾಹೀರಾತು
https://www.timesofkarkala.in/2020/10/blog-post_8.html
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget