ವಿಶ್ವ ಅಂಚೆ ದಿನಾಚರಣೆಯ ಪ್ರಯುಕ್ತ ಅಕ್ಟೋಬರ್ 9ರಂದು ಕಾರ್ಕಳದ ಮುಖ್ಯ ಅಂಚೆ ಇಲಾಖೆಯಲ್ಲಿ ಅಂಚೆ ಇಲಾಖೆ ಮತ್ತು ರೋಟರಿ ಆನ್ಸ್ ಕ್ಲಬ್ & ರೋಟರಾಕ್ಟ್ ಕ್ಲಬ್ ಕಾರ್ಕಳ ಸಹಯೋಗದೊಂದಿಗೆ ಜನರಿಗೆ ಅಂಚೆ ಇಲಾಖೆಯ ಮಾಹಿತಿ ಹಾಗೂ ಅಂಚೆ ಇಲಾಖೆಯ ಸೌಲಭ್ಯಗಳ ಕರಪತ್ರ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹಾಯಕ ಅಂಚೆ ಅಧೀಕ್ಷಕ ಕಾರ್ಕಳ ಉಪ ವಿಭಾಗದ ಚಂದ್ರನಾಯಕ್ ಅವರು ಇಲಾಖೆಯಿಂದ ಜಾರಿಗೆ ಬಂದ ಹೊಸ ಹೊಸ ಸೌಲಭ್ಯಗಳ ಮಾಹಿತಿ ನೀಡಿದರು.
ರೋಟರಿ ಆನ್ಸ್ ನ ಕ್ಲಬ್ಬಿನ ಅಧ್ಯಕ್ಷೆ ರೋ.ರಮಿತಾ ಶೈಲೆಂದ್ರ ರಾವ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಯಿತು.ಮಾರ್ಕೆಟಿಂಗ್ ಕಾರ್ಯನಿರ್ವಾಹಕ ಗುರುಪ್ರಸಾದ್ ಕೆ.ಎಸ್. ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಮಾಡಿದರು.
ವೇದಿಕೆಯಲ್ಲಿ ಕಾರ್ಕಳ ಪೋಸ್ಟ್ ಮಾಸ್ಟರ್ ರಮೇಶ್, DRR ರೋ. ಪ್ರಶಾಂತ್ ಆಚಾರ್ಯ ಹಾಗೂ ರೋಟರಾಕ್ಟ್ ಕ್ಲಬ್ ಕಾರ್ಯದರ್ಶಿ ರೋ. ಸಮೀರ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಧನ್ಯವಾದವನ್ನು ಆನ್ಸ್ ಕ್ಲಬ್ಬಿನ ಕಾರ್ಯದರ್ಶಿ ಅಂಡ್ ಸುಮ ನಾಯಕ್ ಅವರು ಮಾಡಿದರು. ಈ ಕಾರ್ಯಕ್ರಮದಲ್ಲಿ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
Post a comment