ದುಬೈ: ಯುಎಇನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13 ನೇ ಆವೃತ್ತಿಯಲ್ಲಿ ಕಿಂಗ್ಸ್ಇಲೆವೆನ್ ಪಂಜಾಬ್ ತಂಡದ ಸಹ ಮಾಲಕಿ ಮತ್ತು ನಟಿ ಪ್ರೀತಿ ಜಿಂಟಾ 20 ನೇ ಬಾರಿಗೆ ಕೋವಿಡ್-19 ಟೆಸ್ಟ್ ಮಾಡಿಸಿದ್ದಾರೆ.
ಸದ್ಯ ತಂಡದ ಜೊತೆಯಿರುವ ಪ್ರೀತಿ, ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಹುರಿದು೦ಬಿಸುತ್ತಿದ್ದಾರೆ, ಇನ್ನು ಅವರು 20ನೇ ಬಾರಿಗೆ ಕೋವಿಡ್-19 ಟೆಸ್ಟ್ ಮಾಡುತ್ತಿರುರುವುದು ತಮ್ಮ ಇನ್ಸ್ಟಾಗ್ರಾಮ್ ವೀಡಿಯೋದಲ್ಲಿ ಮಾಹಿತಿ ಹಂಚಿಕೊ೦ಡಿದ್ದಾರೆ.
ಕೊರೊನಾ ಟೆಸ್ಟ್ ಪರಿಣಿತರೊಬ್ಬರು ಪ್ರೀತಿ ಜಿಂಟಾ ಹ೦ಚಿಕೊ೦ಡಿರುವ ವೀಡಿಯೋದಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ಈ ವೀಡಿಯೋದಲ್ಲಿ, ಟೆಸ್ಟ್ ಮುಗಿದ ಬಳಿಕ ನನ್ನದು 20ನೇ ಕೋವಿಡ್ ಟೆಸ್ಟ್ ಎಂದು ಹೇಳುತ್ತಾ, ತಾವು ಕೋವಿಡ್ ಟೆಸ್ಟ್ ರಾಣಿ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಈ ಟೂರ್ನಮೆಂಟ್ ನಡೆಯಲುಕಾರಣವಾಗಿರುವ, ದುಡಿಯುತ್ತಿರುವ ಎಲ್ಲಾ ಕೊರೊನಾ ವಾರಿಯರ್ಸ್ಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
Post a comment