ವಿವಿಧ ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ಸ್ಪೂರ್ತಿ ತುಂಬಿದ ಪುಣೆ ಬಂಟರ ಭವನದ ರೂವಾರಿ,ಬಂಟರ ಸಂಘದ ಕ್ರೀಯಾಶೀಲ ಅಧ್ಯಕ್ಷರಾದ ಸಂತೋಷ್ ಶೆಟ್ಟಿ-Times of karkala

ಪುಣೆ:ದಿನಾಂಕ 03-10-2020 ಶನಿವಾರದಂದು ಪುಣೆ ಬಂಟರ ಸಂಘದ  ದಕ್ಷಿಣ ಮತ್ತು ಉತ್ತರ ಪ್ರಾದೇಶಿಕ  ಸಮಿತಿಯ ಸದಸ್ಯರನ್ನು  ರವಿ ಶೆಟ್ಟಿ ಮತ್ತು ಗಣೇಶ್ ಪೂಂಜರ ನೇತೃತ್ವ ದಲ್ಲಿ ಜಂಟಿಯಾಗಿ ಪುಣೆ ಬಂಟರ ಸಂಘದ ಅಧ್ಯಕ್ಷ ಬಂಟರ ಭವನ ನಿರ್ಮಾಣದ ರೂವಾರಿ  ಸಂತೋಷ್ ಶೆಟ್ಟಿಯವರು ಬಂಟರ ಭವನದಲ್ಲಿ ಭೇಟಿ ಮಾಡಿದರು.

ಕಲ್ಪವೃಕ್ಷ ಅನ್ನದಾತ ಯೋಜನೆ:

ಕೊರೋನಾ ಮಹಾಮಾರಿಯ ಸಂಧರ್ಭದಲ್ಲಿ ಸಂತೋಷ್ ಶೆಟ್ಟಿಯವರ ನೇತೃತ್ವದಲ್ಲಿ ಪುಣೆ ಬಂಟರ ಸಂಘವು  ಸಮಾಜಬಾಂಧವರಿಗೆ ಆಹಾರ ಸಾಮಗ್ರಿಗಳ ಕಿಟ್ಟ್ ನ್ನು ಮತ್ತು  ಅತ್ಯಂತ ಕಷ್ಟದಲ್ಲಿ ಇದ್ದಂತಹ ಸಮಾಜ ಬಾಂಧವರಿಗೆ ಆರ್ಥಿಕವಾಗಿ ಸುಮಾರು 15ಲಕ್ಷ ತನಕ ಸಹಾಯ ಧನವನ್ನು ನೀಡಿತ್ತು.ಈ ಹಿನ್ನಲೆಯಲ್ಲಿ ಸಮಿತಿಯ ಸದಸ್ಯರು  ಸಂತೋಷ್ ಶೆಟ್ಟಿಯವರಿಗೆ ಧನ್ಯವಾದವನ್ನು ಸಲ್ಲಿಸಿದರು. 


ಮುಚ್ಚಿದ ಹೋಟೆಲ್ ಉದ್ಯಮಕ್ಕೆ ನೆರವಿಗೆ ಮನವಿ:

ಈಗಾಗಲೇ ಲಾಕ್ ಡೌನ್ ನಿಂದ ನೆಲಕಚ್ಚಿರುವಂತ ನಮ್ಮ ಹೋಟೆಲ್ ಉದ್ಯಮವು ಈಗ ಉದ್ಯಮ ತೆರೆಯಲು ಸರ್ಕಾರದ ಅಧಿಸೂಚನೆ ಬಂದಿದ್ದರು ಕೆಲವು  ಹೋಟೆಲ್ ಚಾಲಕರು ಹೋಟೆಲ್ ತೆರೆಯಲು ಸಾಧ್ಯವಾಗುತ್ತಿಲ್ಲ.ಕಾರಣ ಮೊದಲನೆಯದಾಗಿ ಜಾಗ ಮಾಲೀಕ ರ ಕಿರುಕುಳ.  ಲಾಕ್ ಡೌನ್ ನ ಎಲ್ಲ ಬಾಡಿಗೆ ಕೊಡಿ ನಂತರ ಹೋಟೆಲ್ ತೆರೆಯಿರಿ ಎಂದು ಹೇಳುತಿದ್ದಾರೆ.ಈಗಾಗಲೇ ಡೆಪೊಸಿಟ್ ಮತ್ತು ಖರ್ಚು ಮಾಡಿ ಸಾಲದಲ್ಲಿ ಮುಳುಗಿ ರುವಂತಹ ಹೋಟೆಲ್ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಅಲ್ಲದೆ ಹೋಟೆಲ್ ಮಾಲೀಕರು ಖಾಲಿ ಮಾಡಿಸುವ ಹೋಟೆಲ್ ಗಳನ್ನು ನಮ್ಮವರೆ ಹೋಗಿ ಹೆಚ್ಚು ಬಾಡಿಗೆಗೆ ಡೆಪೊಸಿಟ್ ಕೊಟ್ಟು ಡಿಮಂಡ್ ಮಾಡಿ ತೆಗೆದು ಕೊಳ್ಳುತ್ತಿದ್ದಾರೆ ಇಂತಹ ಸಮಸ್ಯೆಯಿಂದ ಹೋಟೆಲ್ ನಿರ್ವಾಹಕರಿಗೆ ಬಹಳ ಅನ್ಯಾಯವಾಗುತಿದೆ  ಎಂದು  ಅಳಲನ್ನು ತೋಡಿಕೊಂಡರು.

ಅದಕ್ಕೆ ಪ್ರತಿಕ್ರಿಯಿಸಿದ ಅವರು "ನಿಮಗೆ ಯಾರಾದರು ಮಾಲಕರಲ್ಲಿಮಾತನಾಡಲು ನನ್ನ ಅಗತ್ಯ ಬಿದ್ದರೆ ನನ್ನನು ಕರೆಯಿರಿ ನಾನು ಬಂದು ಚರ್ಚೆ ಮಾಡುತ್ತೇನೆ ಮತ್ತು ಯಾರು ಸಹ ಇನ್ನುಮುಂದೆ ಆತ್ಮಹತ್ಯೆ ಯಂತಹ ಕೃತ್ಯಕ್ಕೆ ಕೈ ಹಾಕಿ  ನಿಮ್ಮ ಕುಟುಂಬವನ್ನು ನಿರಾಶ್ರಿತರಾಗಿ ಮಾಡಬಾರದು,ನಾನು ಹೋಟೆಲ್ ಅಸೋಸಿಯೇಷನ್ನ  ಅಧ್ಯಕ್ಷ ಗಣೇಶ್ ಶೆಟ್ಟಿ ಯವರಲ್ಲಿ  ಇದರ ಬಗ್ಗೆ ಚರ್ಚೆ ಮಾಡುತ್ತೇನೆ" ಎಂದು ಸಮಾಧಾನದ ಮಾತುಗಳನ್ನಾಡಿದರು.


ಕಲ್ಪವ್ರಕ್ಷ ವಿದ್ಯಾದಾತ ಯೋಜನೆಯ ಮೂಲಕ ನೆರವು:

2020 ಮತ್ತು 2021ನೇ ಸಾಲಿನ  ಶೈಕ್ಷಣಿಕ ಧನಸಹಾಯವನ್ನು ಅಗತ್ಯವಿದ್ದ ವಿದ್ಯಾರ್ಥಿಗಳಿಗೆ ನೀಡಿ ಅವರ ಕಷ್ಟದಲ್ಲಿ ನೆರವಾಗಬೇಕೆಂದು ಸಂತೋಷ್ ಶೆಟ್ಟಿಯವರಲ್ಲಿ ವಿನಂತಿಸಿಕೊಂಡ ಸಂಧರ್ಭ  ಪುಣೆ ಬಂಟರೆಲ್ಲ ನನ್ನ ಕುಟುಂಬದ ಸದಸ್ಯರಿದ್ದಂತೆ ಪುಣೆ ಬಂಟರ ಸಂಘವು ಮೊದಲಿನಿಂದಲು ಇಂತಹ ಜನಪರ ಕೆಲಸ ಮಾಡಿ ಕೊಂಡು ಬಂದಿದೆ.ನಾವು ನಮ್ಮ ಕೆಲಸ ನಿಲ್ಲಿಸುವುದಿಲ್ಲ. ಕಲ್ಪವ್ರಕ್ಷ ವಿದ್ಯಾದಾತ ಯೋಜನೆಯಡಿಯಲ್ಲಿ ಅರ್ಹ  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ಭರವಸೆಯ ಮಾತುಗಳನ್ನಾಡಿದರು.

  

ಜಾಹೀರಾತು

https://www.timesofkarkala.in/2020/10/blog-post_8.html

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget