ರೋಟರಿ ಆನ್ಸ್ ಕ್ಲಬ್ ಮತ್ತು ರೋಟರಾಕ್ಟ್ ಕ್ಲಬ್ ಕಾರ್ಕಳ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ-Times Of Karkala

 ಕಾರ್ಕಳ,ಅ.13:ರೋಟರಿ ಆನ್ಸ್  ಕ್ಲಬ್ ಮತ್ತು  ರೋಟರಾಕ್ಟ್  ಕ್ಲಬ್ ಕಾರ್ಕಳ ಇವರು ಜಂಟಿಯಾಗಿ ಆಯೋಜಿಸಿದ್ದ  ರಾಜ್ಯ ಮಟ್ಟದ ಪರಿಸರ ದಿನಾಚರಣೆ, ಕೃಷ್ಣಜನ್ಮಾಷ್ಟಮಿ, ಸ್ವಾತಂತ್ರ್ಯ  ದಿನಾಚರಣೆ ಮತ್ತು ಗಣೇಶ್ ಚತುರ್ದಶಿಯ ಸ್ಪರ್ಧೆಗಳ  ಸಮಾರೋಪ ಸಮಾರಂಭ  ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವು ಮಂಗಳವಾರ (ಅಕ್ಟೋಬರ್ 
ಹದಿಮೂರು)ದಂದು  ರೋಟರಿ ಭವನದಲ್ಲಿ ನಡೆಯಿತು. 

ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಕಥೆ, ಕವನ, ಪ್ರಬಂಧ ಮತ್ತು ಕೃಷ್ಣಾಷ್ಟಮಿಯ ದಿನಾಚರಣೆಯ ಪ್ರಯುಕ್ತ ಮುದ್ದುಕೃಷ್ಣ, ಮುದ್ದು ರಾದೆ, ಯಶೋದ ಕೃಷ್ಣ , ಸ್ವತಂತ್ರ ದಿನಾಚರಣೆಯ ಅಂಗವಾಗಿ ಸ್ವತಂತ್ರ ಹೋರಾಟಗಾರ ಛದ್ಮವೇಶ, ದೇಶ ಭಕ್ತಿಗೀತೆ, ಭಾಷಣ ಹಾಗೂ ಗಣೇಶ ಚತುರ್ಥಿಗೆ ಪ್ರಯುಕ್ತ ಮಣ್ಣಿನಲ್ಲಿ ಮಾಡಿದ ಗಣಪತಿಯ ಕಲಾಕೃತಿ, ದಾನ್ಯಗಳ ಗಣಪತಿ, ಭಕ್ತಿಗೀತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ 4600 ಸ್ಪರ್ಧಿಗಳು ಆನ್ಲೈನ್ ಮೂಲಕ ಭಾಗವಹಿಸಿ ದಾಖಲೆ ಬರೆದಿದ್ದರು. ವಿಜೇತರಿಗೆ ಕಾರ್ಕಳದ ಅಜ್ಜಿಮನೆ ಖ್ಯಾತಿಯ ಶ್ರೀಮತಿ ವೀಣಾ ಶಾನುಭೋಗ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷೆ ರೋ. ಸುವರ್ಣ ನಾಯಕ್ ಇಡೀ ಕಾರ್ಯಕ್ರಮದ ಪ್ರಾಯೋಜಕರಾಗಿ ರೋಟರಿ ಆನ್ಸ್ ಕ್ಲಬ್ಬಿನ ಅಧ್ಯಕ್ಷೆಯಾಗಿರುವ ರೋ. ರಮಿತಾ ಶೈಲೆಂದ್ರ ರಾವ್ ಮತ್ತು ರೋಟರಾಕ್ಟ್ ಅಧ್ಯಕ್ಷ ರೋ. ರಾಹುಲ್ ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆನ್ಸ್ ಕಾರ್ಯದರ್ಶಿ ಆನ್  ಸುಮಾ ನಾಯಕ್ ಅವರು ಕಾರ್ಯಕ್ರಮ ನಿರೂಪಿಸಿದರು. ರೋಟರಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿರುವ  ರೋ. ಪ್ರಶಾಂತ್ ಆಚಾರ್ಯರು ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿದಲ್ಲಿ ಸ್ಪರ್ಧೆಯ ವಿಜೇತರು ಮತ್ತು ಅವರ ಪೋಷಕರು ಉಪಸ್ಥಿತರಿದ್ದರು.


ಜಾಹೀರಾತು




https://www.timesofkarkala.in/2020/10/blog-post_8.html












Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget