ಕಾರ್ಕಳ,ಅ.17:ನವರಾತ್ರಿಯನ್ನು ಕಾರ್ಕಳದಲ್ಲಿ ಜನರಿಗೆ ವಿಶೇಷವಾಗಿ ತಲುಪಿಸುವ ಪ್ರಯತ್ನದಲ್ಲಿ ರೋಟರಿ ಆನ್ಸ್ ಕ್ಲಬ್ ಕಾರ್ಕಳ ಹಮ್ಮಿಕೊಂಡಿರುವ ಒಂಬತ್ತು ದಿವಸಗಳ ಭಜನಾಮೃತ ಕಾರ್ಯಕ್ರಮ ಹೋಟೆಲ್ ಪ್ರಕಾಶ್ ನಲ್ಲಿ ಶುಕ್ರವಾರದಂದು ಉದ್ಘಾಟನೆಗೊಂಡಿತ್ತು.
ಈ ಕಾರ್ಯಕ್ರಮದಲ್ಲಿ ಕಾರ್ಕಳದ ಪ್ರಮುಖ ಹನ್ನೊಂದು ಮಹಿಳಾ ಭಜನಾ ಮಂಡಳಿಗಳು ಪಾಲ್ಗೊಂಡಿದ್ದು, ಗುರುವಂದನ ಕಾರ್ಯಕ್ರಮವನ್ನು ಶ್ರೀ ದುರ್ಗಾ ಭಜನಾ ಮಂಡಳಿ ಜೋಡಿರಸ್ತೆಯ ಅಧ್ಯಕ್ಷೆ ಜ್ಯೋತಿ ಪೈ ಅವರು ನಡೆಸಿಕೊಟ್ಟರು. ಖ್ಯಾತ ಭಜನಾ ಶಿಕ್ಷಕರಾಗಿರುವ ಯೋಗೀಶ್ ಕಿಣಿ, ರಶ್ಮಿ ಕಿಣಿ ದಂಪತಿಗಳಿಗೆ ಹಾಗೂ ಖ್ಯಾತ ತಬಲಾ ವಾದಕರು ಆಗಿರುವ ಪ್ರದೀಪ್ ಉಪಾಧ್ಯಾಯ ಮತ್ತು ಭಜನಾ ಒಕ್ಕೂಟದ ಅಧ್ಯಕ್ಷ ಶ್ರೀಕಾಂತ್ ಪ್ರಭು ಇವರಿಗೆ ಈ ವೇಳೆ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್, ಕಾರ್ಯದರ್ಶಿ ಸುಮಾ ನಾಯಕ್ ಮತ್ತು ಆನ್ ಶಶಿಕಲಾಗೌಡ, ಪುರಸಭಾ ಕೌನ್ಸಿಲರ್ ಆಗಿರುವ ಭಾರತೀ ಆಮೀನ್ ಅವರು ಉಪಸ್ಥಿತರಿದ್ದರು.
Post a comment