ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಯೋಗಾಸನ ಶಿಬಿರ-Times Of Karkala

 ಕಾರ್ಕಳ,ಅ.18: ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಹಾಗೂ ಶಾಂತಿವನ ಟ್ರಸ್ಟ್ (ರಿ)ಧರ್ಮಸ್ಥಳ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಿರಿಬೈಲು(ರಿ) ಕಡ್ತಲ ಮತ್ತು ಹವ್ಯಾಸಿ ಕಲಾವೃಂದ,ಕಡ್ತಲ ಇವರ ಸಹಭಾಗಿತ್ವದಲ್ಲಿ, ರಾಜ್ಯ ಯೋಗ ಸಂಘಟಕ ಹಾಗೂ ಸಾಧಕ ಶ್ರೀ ಶೇಖರ ಕಡ್ತಲ, ಇವರಿಂದ ಕೊರೋನಾ ಪ್ರಯುಕ್ತ ವಿಶೇಷ ಯೋಗಾಸನ ಪ್ರಾಣಾಯಾಮ ಧ್ಯಾನ ಶಿಬಿರವು  17.10.2020ರಿಂದ  26.10.2020ರ ವರೆಗೆ ಪ್ರತಿ ದಿನ ಬೆಳಗ್ಗೆ ಪ್ರಾತಃ ಕಾಲದಲ್ಲಿ 5.30ರಿಂದ 6.30ರ ವರೆಗೆ ನಡೆಯುತ್ತಿದೆ. 

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಅಧ್ಯಕ್ಷರಾದ ರೊಟೇರಿಯನ್ ಪ್ರಶಾಂತ್ ಬಿಳಿರಾಯ ಇವರು ಯೋಗ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಈ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ವಿನಂತಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ಹೆಗ್ಡೆ, ಉದ್ಯಮಿಗಳಾದ  ಶ್ರೀ ಯೋಗೀಶ್ ಮಲ್ಯ, ಶಿಬಿರ ಸಂಚಾಲಕರಾದ ಶ್ರೀ ಪ್ರವೀಣ್ ಹೆಗ್ಡೆ, ಶ್ರೀ ಸತೀಶ್ ಹೆಗ್ಡೆ, ಶ್ರೀಮತಿ ಉಮಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಶೇಖರ್ ನಾಯ್ಕ್ ಕಡ್ತಲ ಇವರು ಕಾರ್ಯಕ್ರಮ ನಿರೂಪಿಸಿ ಅತಿಥಿಗಳನ್ನು ಸ್ವಾಗತಿಸಿದರು.ಸುಮಾರು ಅರವತ್ತು  ಶಿಬಿರಾರ್ಥಿಗಳು ಪ್ರತಿದಿನ ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.


ಜಾಹೀರಾತು
https://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget