ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರೋಟರಿ ಆನ್ಸ್ ಕ್ಲಬ್ ಮತ್ತು ರೋಟರಾಕ್ಟ್ ಕ್ಲಬ್ ಕಾರ್ಕಳ ಇವರು ವಾಟ್ಸಪ್ ಗಳ ಮೂಲಕ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯ ಸ್ಪರ್ಧೆಯನ್ನು ಆಯೋಜಿಸಿದ್ದು ಅದರಲ್ಲಿ 930 ಸ್ಪರ್ಧಿಗಳು ಬೇರೆ ಬೇರೆ ರಾಜ್ಯದಿಂದ ವಿಭಿನ್ನ ಸ್ಪರ್ಧೆಗಳಾದ ಛದ್ಮವೇಶ, ರಸಪ್ರಶ್ನೆ, ಭಾಷಣ (ಮಾದರಿ ಶಿಕ್ಷಕ), ಕವನ (ಶಿಕ್ಷಣ ಅಂದು ಇಂದು), ಕಸದಿಂದ ರಸ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಅಕ್ಟೋಬರ್ 8 ರಂದು ಜಿಲ್ಲಾ ಪ್ರತಿನಿಧಿ ಪದಗ್ರಹಣ ಕಾರ್ಯಕ್ರಮದಲ್ಲಿ ನೀಡಲಾಯಿತು.
ವಿಜೇತರಿಗೆ ಬಹುಮಾನವನ್ನು ವಲಯ ಸೇನಾನಿ ರೋ. ಮಾದೇಗೌಡ ರಿಂದ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ರೋಟರಾಕ್ಟ್ ಚೇರ್ ಮ್ಯಾನ್ ರೋ. ಹರಿಪ್ರಕಾಶ್ ಶೆಟ್ಟಿ, ಜಿಲ್ಲಾ ಪ್ರತಿನಿಧಿ ರೋ. ಪ್ರಶಾಂತ ಆಚಾರ್ಯ ರೋಟರಾಕ್ಟ್ ಅಧ್ಯಕ್ಷ ರಾಹುಲ್ ರಾಜೇಶ್ ಕಾರ್ಯದರ್ಶಿ ಸಮೀರ್ ಹೆಗಡೆ ಉಪಸ್ಥಿತರಿದ್ದರು.
Post a comment