ಸಾಣೂರು:ಯುವಜನತೆಗೆ ದುಶ್ಚಟಗಳಿಂದ ದೂರವಿರಲು ಶಾಸಕರ ಕರೆ-Times Of Karkala

 ಕಾರ್ಕಳ,ಅ.12: ಯುವಜನತೆ  ದುಶ್ಚಟಗಳಿಗೆ ಬಲಿಯಾಗದೆ ವ್ಯಸನ ಮುಕ್ತ ಜೀವನ ನಡೆಸಬೇಕೆಂದು ಸರ್ಕಾರದ  ಮುಖ್ಯ  
ಸಚೇತಕರು ಕಾರ್ಕಳ  ವಿಧಾನಸಭಾ ಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಕರೆ ಕೊಟ್ಟರು.

 ಅವರು ಭಾರತ ಸರ್ಕಾರದ  ಯುವಜನ  ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ ಹಾಗೂ ಉಡುಪಿ ಜಿಲ್ಲಾ  ರಾಜ್ಯೋತ್ಸವ ಪ್ರಶಸ್ತಿ ಮತ್ತು ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯುವಕ ಮಂಡಲ ಸಾಣೂರು ಇವುಗಳ ಆಶ್ರಯದಲ್ಲಿ ರವಿವಾರ (11/10/2020) ಸಾಣೂರು ಯುವಕ ಮಂಡಲದ ಮೈದಾನದಲ್ಲಿ ನಡೆದ ಫಿಟ್ ಇಂಡಿಯಾ ಸರಣಿ ಕಾರ್ಯಕ್ರಮದ  ಸಮಾರೋಪ ಮತ್ತು ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತ ಹೇಳಿದರು.
 ವ್ಯಸನ ಮುಕ್ತ ಸಮಾಜ ನಿರ್ಮಾಣ  ಯುವಕರ ಗುರಿಯಾಗಬೇಕು. ಈ ಹಿನ್ನಲೆಯಲ್ಲಿ ಆರೋಗ್ಯ ಸದೃಢವಾಗಲು ಫಿಟ್ನೆಸ್ ಅಗತ್ಯ. ಸರ್ಕಾರದ  ಯೋಜನೆಯನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ  ಮಾಡುತ್ತಿರುವ ಸಾಣೂರು ಯುವಕ ಮಂಡಲದ  ಸಾಮಾಜಿಕ ಚಿಂತನೆ ಅತ್ಯಂತ ಶ್ಲಾಘನೀಯ  ಮತ್ತು ಜಿಲ್ಲೆಗೆ ಮಾದರಿ. ಇಂತಹ ಸೇವಾ ಮನೋಭಾವದಿಂದ ಸಮಾಜದ ಅಭಿವೃದ್ಧಿ ಸಾಧ್ಯ  ಎಂದರು. 
ನೆಹರು ಯುವ ಕೇಂದ್ರದ ಉಭಯ ಜಿಲ್ಲಾ ಲೆಕ್ಕ ಪರಿಶೋಧಕರಾದ ಶ್ರೀ ವಿಷ್ಣುಮೂರ್ತಿ  ಪ್ರಾಸ್ತಾವಿಕವಾಗಿ ಮಾತನಾಡಿ ಸಾಣೂರು ಯುವಕ ಮಂಡಲದ ತಂಡ ಫಿಟ್ ಇಂಡಿಯಾ ಸರಣಿ ಕಾರ್ಯಕ್ರಮಗಳನ್ನು  ಯಶಶ್ವಿಯಾಗಿ ನಡೆಸಿದೆ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೆ. ಎಮ್.ಎಫ್ ನಿರ್ದೇಶಕರಾದ   ಸಾಣೂರು ನರಸಿಂಹ ಕಾಮತ್ , ಯುವಕ ಮಂಡಲದ ಸೇವಾ ಕಾರ್ಯಗಳು ಜನರ ಭಾವನೆಗಳಿಗೆ ಸ್ಪಂದನೆಯಾಗುತ್ತದೆ. ಇನ್ನಷ್ಟು ಸಮಾಜಮುಖಿ ಚಿಂತನೆಗಳು ಈ ತಂಡದಿಂದ ಮೂಡಿಬರಲಿ ಎಂದರು. ಮಂಡಲದ ಅಧ್ಯಕ್ಷರಾದ ಶ್ರೀ ಪ್ರಸಾದ್ ಪೂಜಾರಿ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಪ್ರವೀಣ್ ಕೋಟ್ಯಾನ್, ಯುವ ಉದ್ಯಮಿ ಮೆಲ್ರೊಯ್ ಡಿ ಸಿಲ್ವ, ಯುವರಾಜ್ ಜೈನ್,  ವಿಜೇಶ್ ಕುಲಾಲ್, ಶುಭಕರ್ ಶೆಟ್ಟಿ ,ಕಿರಣ್ ಕುಲಾಲ್ ಉಪಸ್ಥಿತರಿದ್ದರು.ಮಂಡಲದ ಸದಸ್ಯ ದೀಕ್ಷಿತ್ ಆಚಾರ್ಯ , ಮೋಹನ್ ಶೆಟ್ಟಿ , ಉಪಾಧ್ಯಕ್ಷ ಶ್ರೀ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.  ಆಹ್ವಾನಿತ 12 ತಂಡಗಳು ಭಾಗವಹಿಸಿದ್ದವು.

ಜಾಹೀರಾತು
https://www.timesofkarkala.in/2020/10/blog-post_8.html
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget