ಕಾರ್ಕಳ:ದ್ವಿಚಕ್ರ ವಾಹನಕ್ಕೆ ಗೂಡ್ಸ್ ವಾಹನ ಗಾಡಿ ಡಿಕ್ಕಿ,ಮಹಿಳೆಗೆ ಗಂಭೀರ ಗಾಯ,ವಾಹನ ಜಖಂ-Times of karkala

ಕಾರ್ಕಳ:ದ್ವಿಚಕ್ರ ವಾಹನಕ್ಕೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರೆ ಗಂಭೀರ ಗಾಯಗೊಂಡಿದ್ದು ವಾಹನ ಜಖಂ ಗೊಂಡ ಘಟನೆ ತಾಲೂಕಿನ ಸಾಣೂರು ಗ್ರಾಮದ  
ಲಕ್ಷ್ಮೀ  ಕಲ್ಯಾಣ ಮಂಟಪ, ಪುಲ್ಕೇರಿ ಬಳಿ ದಿನಾಂಕ 26 ರಂದು ನಡೆದಿದೆ.

  


ಬಜಗೋಳಿಯಿಂದ ಪುಲ್ಕೇರಿ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನ (ನಂಬ್ರ KA-19-AC-6660) ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಪುಲ್ಕೇರಿ ಕಡೆಯಿಂದ ಕರಿಯಕಲ್ಲು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ (ನಂಬ್ರ KA-19-EL-1368) ಢಿಕ್ಕಿ ಹೊಡೆದ ಪರಿಣಾಮ ಸವಾರೆ  ಪುಷ್ಪಲತಾ ಅಮೀನ್ ರವರು ಗಂಭೀರ ಗಾಯಗೊಂಡಿದ್ದಾರೆ.


ದ್ವಿಚಕ್ರ ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿದ್ದು, ಬಲ ಕೈಯ್ಯ ಮೂಳೆ ಮುರಿತ ಮತ್ತು ಬಲಕಾಲಿಗೆ ತರಚಿದ ಗಾಯವಾಗಿದ್ದು, ಅಲ್ಲದೆ ದ್ವಿಚಕ್ರ ವಾಹನ ಕೂಡಾ ಜಖಂಗೊಂಡಿರುತ್ತದೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

 ಪೋಲೀಸ್ ವರದಿ

ಕಾರ್ಕಳ: ದಿನಾಂಕ 26/10/2020 ರಂದು ಮಧ್ಯಾಹ್ನ 12:50 ಗಂಟೆಗೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಲಕ್ಷ್ಮೀ ಕಲ್ಯಾಣ ಮಂಟಪ, ಪುಲ್ಕೇರಿ ಇದರ ಬಳಿ ಹಾದು ಹೋಗುವ ಬಜಗೋಳಿ-ಪುಲ್ಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್ ವಾಹನದ ನಂಬ್ರ KA-19-AC-6660 ನೇಯದರ ಚಾಲಕ ತನ್ನ  ಗೂಡ್ಸ್ ವಾಹನವನ್ನು ಬಜಗೋಳಿ ಕಡೆಯಿಂದ ಪುಲ್ಕೇರಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ತನ್ನ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಶ್ರೀಮತಿ ಪುಷ್ಪಲತಾ ಅಮೀನ್ ಎಂಬುವವರು ಪುಲ್ಕೇರಿ ಕಡೆಯಿಂದ ಕರಿಯಕಲ್ಲು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನ ನಂಬ್ರ KA-19-EL-1368 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಶ್ರೀಮತಿ ಪುಷ್ಪಲತಾ ಅಮೀನ್ ರವರು ದ್ವಿಚಕ್ರ ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯ, ಬಲಕೈಯ್ಯ ಮೂಳೆ ಮುರಿತ ಮತ್ತು ಬಲಕಾಲಿಗೆ ತರಚಿದ ಗಾಯವಾಗಿದ್ದು, ಅಲ್ಲದೆ ದ್ವಿಚಕ್ರ ವಾಹನ ಕೂಡಾ ಜಖಂಗೊಂಡಿರುತ್ತದೆ. ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2020 ಕಲಂ: 279,337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜಾಹೀರಾತುhttps://www.timesofkarkala.in/2020/10/blog-post_8.html


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget