ಸಾಣೂರು:ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ-Times of karkala

ಸಾಣೂರು:"ಸೋಲು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿದಾಗ ಯಶಸ್ಸು ಸಾಧ್ಯ" ಎಂದು ಬ್ಯಾಂಕ್ ಆಫ್ ಬರೋಡದ ಅಧಿಕಾರಿ ಶ್ರೀ ಮಧುಸೂಧನ್ ರೈ  ಅಭಿಪ್ರಾಯಪಟ್ಟರು.ಅವರು ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ ಹಾಗೂ ಉಡುಪಿ ಜಿಲ್ಲಾ  ರಾಜ್ಯೋತ್ಸವ ಪ್ರಶಸ್ತಿ ಮತ್ತು ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯುವಕ ಮಂಡಲ ರಿ ಸಾಣೂರು ಇವುಗಳ ಆಶ್ರಯದಲ್ಲಿ ದಿನಾಂಕ 11/10/2020ನೇ  ರವಿವಾರ ಸಂಜೆ ಸಾಣೂರು ಯುವಕ ಮಂಡಲದ ಮೈದಾನದಲ್ಲಿ  ಫಿಟ್ ಇಂಡಿಯಾ ಸರಣಿ ಕಾರ್ಯಕ್ರಮದ ಅಂಗವಾಗಿ ನಡೆದ  ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟದ ಬಹುಮಾನ ವಿತರಣಾ ಸಮಾರಂಭವನ್ನು ಉದ್ದೇಶಿಸಿ  ಮಾತನಾಡಿದರು.


ಮುಖ್ಯ ಅತಿಥಿಯಾಗಿ ಮಂಡಲ ಮಹಾ ಪೋಷಕ ಸದಸ್ಯರಾದ ಶ್ರೀ ಸತ್ಯಾರ್ಥಿ ರಾವ್ ಶುಭ ಹಾರೈಸಿದರು. ಮಂಡಲ ಅಧ್ಯಕ್ಷರಾದ ಶ್ರೀ ಪ್ರಸಾದ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಅಧ್ಯಕ್ಷರಾದ ಶ್ರೀ ಮಹೇಶ್ ಕುಮಾರ್ ಶ್ರೀ ಜಗದೀಶ್ ಕುಮಾರ್ ಶ್ರೀ ಶಂಕರ್ ಶೆಟ್ಟಿ ಶ್ರೀ ಪ್ರಕಾಶ್ ಮಡಿವಾಳ ಪದಾಧಿಕಾರಿಗಳಾದ ಅನಿಲ್ ಕೋಟ್ಯಾನ್ ಪ್ರಕಾಶ್ ರಾವ್ ರಾಜೇಶ್ ಶರತ್ ಪ್ರಖ್ಯಾತ್ ಸುಮಂತ್ ಸಮಿತ್ ದಿಲೀಪ್  ಕ್ರೀಡಾ ಕಾರ್ಯದರ್ಶಿಗಳಾದ  ಹರೀಶ್ ರಾವ್ ರೋಹಿತ್  ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ ಬಹುಮಾನಗಳ ಪಟ್ಟಿ ವಾಚಿಸಿದರು.ಕಾರ್ಯದರ್ಶಿ ಮೋಹನ್ ಶೆಟ್ಟಿ ಸ್ವಾಗತಿಸಿ,ನಿರೂಪಿಸಿ ಧನ್ಯವಾದ ಸಲ್ಲಿಸಿದರು.ಆಹ್ವಾನಿತ 12 ತಂಡಗಳು ಪಾಲ್ಗೊಂಡ ಪಂದ್ಯಾಟದಲ್ಲಿ ಅಶ್ವಿನಿ ಆರೇಂಜರ್ಸ್ಸ್ ಪ್ರಥಮ ಸ್ಥಾನ ಶ್ರೀದೇವಿ ಕಜೆ ದ್ವಿತೀಯ ಸ್ಥಾನ ಪಡೆದುಕೊಂಡವು. 


ಜಾಹೀರಾತು
https://www.timesofkarkala.in/2020/10/blog-post_8.html


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget