ಬ್ರಹ್ಮಾವರ:ಗುತ್ತಿಗೆದಾರರೊಬ್ಬರು ಸ್ಥಳೀಯ ಶಾಲೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕು ಪಾಂಡೇಶ್ವರದಲ್ಲಿ ನಡೆದಿದೆ.
ಬಾವಿ ನಿರ್ಮಾಣ ಕಾರ್ಯ ಮಾಡುವ ಅಬ್ಬಾಸ್ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರರು. ಗುತ್ತಿಗೆದಾರರಾಗಿದ್ದ ಅಬ್ಬಾಸ್ ಶಾಲೆಯ ಆವರಣದಲ್ಲಿಯೇ ಯೋಚಿಸುತ್ತ ಕುಳಿತಿದ್ದರು.ಬಳಿಕ ಪರಿಚಯಸ್ಥರಿಗೆ ತನ್ನ ಬಳಿಯಲ್ಲಿದ್ದ ಚೀಟಿ ಹಾಗೂ ಮೊಬೈಲ್ ಕೊಟ್ಟಿದ್ದರು. ಚೀಟಿ ಮತ್ತು ಮೊಬೈಲ್ ಮನೆಗೆ ಕೊಟ್ಟು ಬನ್ನಿ ಎಂದಿದ್ದರು.
ಮನೆಯವರು ಶಾಲೆ ಬಳಿ ಬರುವ ಮೊದಲೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆರ್ಥಿಕ ಸಂಕಷ್ಟದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment