ಕಾರ್ಕಳ:ಮಹಿಳೆ ಆತ್ಮಹತ್ಯೆ,ಪ್ರಕರಣ ದಾಖಲು-Times of karkala

ಕಳೆದ ಮೂರುವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೋರ್ವರು ಆತ್ಮಹತ್ಯೆ  ಮಾಡಿಕೊಂಡ ಘಟನೆ ಅ.11ರಂದು ಕಾರ್ಕಳದಲ್ಲಿ ನಡೆದಿದೆ.

ಕಾರ್ಕಳ  ಅನಂತಶಯನ ನಾಗರಬಾವಿ ರಸ್ತೆ ನಿವಾಸಿ  ಲಲಿತಾ (56) ಆತ್ಮಹತ್ಯೆ ಫ್ಯಾನಿಗೆ ನೇಣು ಬಿಗಿದುಕೊಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.



ಪೊಲೀಸ್ ವರದಿ:ಕಾರ್ಕಳ: ದಿನಾಂಕ 11/10/2020 ರಂದು ಮದ್ಯಾಹ್ನ 3:30 ಗಂಟೆಗೆ ಪಿರ್ಯಾದಿದಾರರಾದ ಅನಂತಪದ್ಮನಾಭ ಜೋಯಿಷ್‌‌‌ (64), ತಂದೆ:ಗೋಪಾಲಕೃಷ್ಣ ಜೋಯಿಷ್‌‌, ವಾಸ:ಪದ್ಮನಿಲಯ, ಅನಂತಶಯನ ನಾಗರಬಾವಿ ರಸ್ತೆ ಕಾರ್ಕಳ ಇವರ ಪತ್ನಿ ಮೃತ ಲಲಿತಾ (56) ಇವರು ರು 3 ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಔಷಧ ಮಾಡಿದರೂ ಗುಣಮುಖರಾಗದೇ ಇದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಮಲಗುವ ಕೋಣೆಯಲ್ಲಿ ಪ್ಯಾನ್‌‌ಗೆ ನೇಣುಬಿಗಿದುಕೊಂಡವರನ್ನು, ನೇಣಿನಿಂದ ಬಿಡಿಸಿ ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುತ್ತಾರೆ ಎಂಬುದಾಗಿ ತಿಳಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 31/2020 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜಾಹೀರಾತು




https://www.timesofkarkala.in/2020/10/blog-post_8.html












Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget