ಸತ್ತ ವ್ಯಕ್ತಿಗೂ ಕಿಟ್ ವಿತರಣೆ..!!ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಂದ ಕಾರ್ಮಿಕ ಇಲಾಖೆಗೆ ಆಹಾರ ಕಿಟ್ ಪಡೆಯಲು ಬೋಗಸ್ ಪಟ್ಟಿ ಸಲ್ಲಿಕೆ: ಪುರಸಭಾ ಸದಸ್ಯ ಶುಭದ ರಾವ್ ಆರೋಪ-Times of karkala

ಸತ್ತ ವ್ಯಕ್ತಿಗೂ ಕಿಟ್ ವಿತರಣೆ..!!ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಂದ ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ ಪಡೆಯಲು ಬೋಗಸ್ ಪಟ್ಟಿ ಸಲ್ಲಿಕೆ: ಪುರಸಭಾ ಸದಸ್ಯ ಶುಭದ ರಾವ್ ಆರೋಪ-Times of karkala 

 

ಕೊರೋನಾ ಸಂಧರ್ಭದಲ್ಲಿ ವಿತರಿಸಲಾದ ಕಿಟ್ ನಲ್ಲಿ ಬಹುದೊಡ್ಡ ಹಗರಣ ನಡೆದಿದೆ ಎಂದು ಪುರಸಭಾ ಸದಸ್ಯ ಶುಭದ್ ರಾವ್ ಆರೋಪಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು  ಶಾಸಕರು ಸರಕಾರಕ್ಕೆ ಸಲ್ಲಿಸಿದ ಬೋಗಸ್ ಪಟ್ಟಿ ಹಾಗೂ ಸತ್ತವರ ಹೆಸರಿನಲ್ಲಿ ನೀಡಿದ ಕಿಟ್ ಬಗ್ಗೆಯೂ ಮಾತನಾಡಿದರು.

ಮೃತಪಟ್ಟ ವ್ಯಕ್ತಿಯ   ಮರಣ ಪ್ರಮಾಣಪತ್ರ


ಕೋವಿಡ್ ಲಾಕ್ ಡೌನ್ ಸಂದರ್ಭ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗುವಂತೆ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಕಳಕ್ಕೆ 5000 ಆಹಾರ ಕಿಟ್ಟನ್ನು ವಿತರಿಸಲು ರೂ. 44,95,000 ಬಿಡುಗಡೆ ಮಾಡಿದ್ದು, ಈ ಆಹಾರ ಕಿಟ್ ಅನ್ನು ನ್ಯಾಯಯುತವಾಗಿ ವಿತರಿಸದೆ ಕಾರ್ಕಳ ಶಾಸಕರು ತಮ್ಮದೇ  ಸರಕಾರಕ್ಕೆ ಮತ್ತು ಜನತೆಗೆ ದ್ರೋಹ ಬಗೆದಿದ್ದಾರೆ.ಆದ್ದರಿಂದ ಶಾಸಕರು ತಕ್ಷಣ ರಾಜೀನಾಮೆ ನೀಡಬೇಕು.ಕೋವಿಡ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಸಹಕಾರಿಯಾಗುವಂತೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು ಇವರು 13 ಆಹಾರ ಪದಾರ್ಥಗಳನ್ನು ಒಳಗೊಂದು ಒಂದು ಕಿಟ್ಟಿಗೆ ರೂ. 899 ರಂತೆ 5000 ಕಿಟ್ಟಿಗೆ ರೂ. 44,95,000 ಬಿಡುಗಡೆ ಮಾಡಿದೆ. ಕಿಟ್ಟನ್ನು ಪಡೆದ ಫಲಾನುಭವಿಗಳ ವಿವರವನ್ನು ಮಾಹಿತಿ ಹಕ್ಕಿನ ಮೂಲಕ ಪಡೆದು ಪರಿಶೀಲಿಸಿದಾಗ ಇದೊಂದು ಬೋಗಸ್ ಪಟ್ಟಿಯೆಂದೂ ಮತ್ತು ಈ ಬೋಗಸ್ ಪಟ್ಟಿಯ ಮೂಲಕ ಅವ್ಯವಹಾರ ನಡೆಸಿ ಸರಕಾರಕ್ಕೆ ಮತ್ತು ಜನತೆಗೆ ವಂಚಿಸಲಾಗಿದೆ ಎಂದು ಕಂಡು ಬರುತ್ತದೆ. ಪಟ್ಟಿಯಲ್ಲಿ ಕಿಟ್ಟನ್ನು ಪಡೆಯದೇ ಇದ್ದವರು, ಇನ್ನಾವುದೋ ಬೇರೆ ಯೋಜನೆಯ ಫಲಾನುಭವಿಗಳು ಮತ್ತು ಇದಕ್ಕಿಂತಲೂ ಮಿಗಿಲಾಗಿ ಮೃತರಾದವರ ಹೆಸರೂ ಇರುವುದು ಕಂಡು ಬಂದಿದ್ದರಿಂದ ಇದು ಬೋಗಸ್ ಪಟ್ಟಿಯೆನ್ನುವುದಕ್ಕೆ ಬಲವಾದ ಸಾಕ್ಷಿಯಾಗಿದೆ. 

ಬಡವರ ಹೆಸರಿನಲ್ಲಿ ಊರಿನ ದಾನಿಗಳಿಂದ ಹಣ ಸಂಗ್ರಹ ಮಾಡಿದ್ದ ಶಾಸಕರು ಆ ಹಣದಲ್ಲಿ ಸುಮಾರು 350 ರೂ. ಗಳ ಸಣ್ಣ ಸಣ್ಣ ಕಿಟ್ಟನ್ನು ಚಿನ್ನದ ಕೆಲಸಗಾರರು,ಕ್ಷೌರಿಕರು,ಮಡಿವಾಳರು,ರಿಕ್ಷಾ ಚಾಲಕ ಮಾಲಕರು,ಬಸ್ ಸಿಬ್ಬಂದಿಗಳು ಮತ್ತು ಇತರರಿಗೆ ವಿತರಿಸಿದ್ದು ಅವರ ಹೆಸರನ್ನೇ ಕಾರ್ಮಿಕ ಇಲಾಖೆಗೆ ಸುಳ್ಳು ಮಾಹಿತಿ ಕಳುಹಿಸಿ ಇವರೆಲ್ಲರಿಗೂ ರೂ. 899 ರ ಇಲಾಖೆಯ ಕಿಟ್ಟನ್ನೇ ನೀಡಲಾಗಿದೆ ಎಂದು ಬಡ ಕಾರ್ಮಿಕರಿಗೆ ಹಾಗೂ ಇಲಾಖೆಗೆ ವಂಚಿಸಲಾಗಿದೆ. 

ಆಹಾರ ಕಿಟ್ ವಿತರಿಸಲು ಕರೆಯಲಾಗಿದ್ದ ಕೊಟೇಶನ್ ಕೂಡ ನಕಲಿ ಮತ್ತು ಬೋಗಸ್ ಎಂದು ದಾಖಲೆಯಿಂದ ತಿಳಿದು ಬರುತ್ತದೆ. ಪಕ್ಷದ ಪದಾಧಿಕಾರಿಗಳಿಂದಲೇ ಕೊಟೇಶನ್ ಹಾಕಿಸಿ ಅವರನ್ನು ಬಲಿಪಶು ಮಾಡುವ ಮೂಲಕ ಸರಕಾರದ ಹಣವನ್ನು ಬಡವರ ಹೆಸರಿನಲ್ಲಿ ಲೂಟಿ ಮಾಡಲಾಗಿದೆ.

ಕಿಟ್ ವಿತರಿಸಿದ ಏಜೆನ್ಸಿ ಯವರ ಬ್ಯಾಂಕ್ ಖಾತೆಗೆ ಕಾರ್ಮಿಕ ಇಲಾಖೆಯಿಂದ ನೇರವಾಗಿ ಹಣ ಪಾವತಿಯಾಗಿದ್ದು ಆ ಏಜನ್ಸಿಯು  ಅದೇ ಖಾತೆಯಿಂದ ಪಕ್ಷದ ಪದಾಧಿಕಾರಿಯವರ ಬ್ಯಾಂಕ್ ಖಾತೆಗೆಗಳಿಗೆ ಬೃಹತ್ ಮೊತ್ತದ ಹಣ ವರ್ಗಾವಣೆಯಾಗಿರುವುದು ಕಿಟ್ ವಿತರಣೆಯಲ್ಲಿ ಅವ್ಯವಹಾರ ಆಗಿದೆ ಎನ್ನುವುದುಕ್ಕೆ ಇನ್ನೊಂದು ಸಾಕ್ಷಿಯಾಗಿ ಕಂಡು ಬರುತ್ತದೆ.

ಕೊರೋನಾ ವೈರಸ್ ಹಬ್ಬುತ್ತಿದ್ದ ಸಂದರ್ಭದಲ್ಲಿ ಬಡಜನರು ಕೆಲಸವಿಲ್ಲದೆ ಕಂಗಾಲಾಗಿದ್ದರು. ಇಂತಹ ಸಂದರ್ಭದಲ್ಲಿ ಬಡವರ ಹಸಿವು ನೀಗಿಸಲು ಸರಕಾರ ಅಥವಾ ಇಲಾಖೆ ಬಿಡುಗಡೆಗೊಳಿಸಿದ ಆಹಾರ ಕಿಟ್ ಗಳನ್ನೂ ಅವರಿಗೆ ವಿತರಿಸುವುದು ಶಾಸಕರಾದವರ ಜವಾಬ್ದಾರಿಯಾಗಿರುತ್ತದೆ. ಆದರೆ ನಮ್ಮ  ಶಾಸಕರು ಬಡವರ ಹೆಸರಿನಲ್ಲಿ ವಂಚಿಸಿರುವುದು ಇಡೀ ರಾಜ್ಯ ತಲೆತಗ್ಗಿಸುವಂತಾಗಿದೆ. ನಂಬಿಕೆಯಿತ್ತು ಆರಿಸಿ ಕಳಿಸಿದ ಮತದಾರರ ಅನ್ನ  ಕಿತ್ತುಕೊಳ್ಳುವ ಕೆಲಸ ಮಾಡಿರುವುದು ನಿಜಕ್ಕೂ ದುರಂತ. ಈ ಫಲಾನುಭವಿಗಳ ಪಟ್ಟಿ ಬೋಗಸ್  ಅಲ್ಲವೆಂದು ಸಾಬೀತು ಪಡಿಸುವಂತೆ ಮಾನ್ಯ ಶಾಸಕರಲ್ಲಿ ಕಾರ್ಕಳ ಜನತೆಯ ಪರವಾಗಿ ಸವಾಲು ಹಾಕಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸುತ್ತೇನೆ.  ಅಸಾಧ್ಯವಾದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಿಸುತ್ತೇನೆ. 


ಮಾನ್ಯ ಶಾಸಕರಿಗೆ ಮೂರು ಪ್ರಶ್ನೆಗಳು:

ಆಹಾರ ಕಿಟ್ ವಿತರಿಸಲು ಕಾರ್ಮಿಕ ಇಲಾಖೆ ಇಷ್ಟು ದೊಡ್ಡ ಮೊತ್ತ ಬಿಡುಗಡೆ ಮಾಡಿದ್ದರೂ ಅದನ್ನು ಬಹಿರಂಗಪಡಿಸದೆ ಮುಚ್ಚಿಟ್ಟಿದ್ದು ಯಾಕೆ?

ಸರಕಾರಕ್ಕೆ ಸಲ್ಲಿಸಿದ್ದ ಫಲಾನುಭವಿಗಳ ಪಟ್ಟಿಯಲ್ಲಿ ಮೃತರು ಮತ್ತು ಕಿಟ್ಟನ್ನು ಪಡೆಯದೇ ಇದ್ದವರ ಹೆಸರು ಬರಲು ಕಾರಣ ಏನು?

ಆಹಾರ ಕಿಟ್ ವಿತರಿಸಿದ ಏಜನ್ಸಿ ಯ ಬ್ಯಾಂಕ್ ಖಾತೆಯಿಂದ ಪಕ್ಷದ ಪದಾಧಿಕಾರಿಗಳ ಖಾತೆಗೆ ಹಣ ವರ್ಗಾವಣೆಯಾಗಲು ಕಾರಣವೇನು?
  

ಜಾಹೀರಾತು

https://www.timesofkarkala.in/2020/10/blog-post_8.html

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget