ಅಜೆಕಾರು:ಗೇರುಬೀಜ ಕಾರ್ಖಾನೆಯಲ್ಲಿ ಕಳ್ಳತನ-Times of karkala

ಅಜೆಕಾರು,ಅ.29  :ಮರ್ಣೆ ಗ್ರಾಮದಲ್ಲಿರುವ ಗೇರುಬೀಜ ಕಾರ್ಖಾನೆಯಲ್ಲಿ ಗೇರುಬೀಜ ಕಳ್ಳತನವಾಗಿರುವ ಕುರಿತು ಅಜೆಕಾರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಪ್ರವೀಣ್ ಆಳ್ವಾ ಎಂಬುವವರ ಸೌತ್ ಇಂಡಿಯಾ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಗಿರೀಶ್ ಕಾಮತ್ ಎಂಬುವವರು ದೂರು ನೀಡಿದ್ದಾರೆ.

ಅ.13 ರಂದು ಫ್ಯಾಕ್ಟರಿ ಯಲ್ಲಿ ಕೆಲಸ ಮುಗಿಸಿ ಫ್ಯಾಕ್ಟರಿಯ ಕೀಯನ್ನು ಕೆಲಸದ ದುದುವಾ ಎಂಬುವವರಲ್ಲಿ ನೀಡಿ ಮನೆಗೆ ಹೋಗಿದ್ದರು. ಬಳಿಕ ಮರುದಿನ ಬೆಳಿಗ್ಗೆ ದುದುವಾರವರು ಫ್ಯಾಕ್ಟರಿ ಬೀಗ ತೆರೆದು ಕೆಲಸ ಪ್ರಾರಂಭಿಸಿದ್ದಾರೆ.

ಗೇರುಬೀಜವನ್ನು ಲಾರಿಗೆ ಲೋಡ್ ಮಾಡುಗಾವ ಹಿಂದಿನ ದಿನ ಸಂಸ್ಕರಿಸಿದ್ದ 75000 ರೂ ಮೌಲ್ಯದ 125 ಕೆಜಿ ತೂಕದ ಗೇರುಬೀಜ ಕಳವಾಗಿರುವುದು  ಬೆಳಕಿಗೆ ಬಂದಿದೆ. ಈ ಬಗ್ಗೆ ಅಜೆಕಾರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಪೋಲೀಸ್ ವರದಿ

ಅಜೆಕಾರು: ಪಿರ್ಯಾದಿದಾರರಾದ ಗಿರೀಶ್ ಕಾಮತ್(50), ತಂದೆ: ದಿ. ಆನಂದ ಕಾಮತ್, ವಾಸ: “ಶ್ರೇಯಸ್” ಅಂಡಾರು ಜಗದಾಂಬಾ ದೇವಸ್ಥಾನದ ಬಳಿ ಅಂಡಾರು ಗ್ರಾಮ. ಹೆಬ್ರಿ ತಾಲೂಕು ಇವರು ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಮಂಗಳನಗರ ಎಂಬಲ್ಲಿರುವ ಕಾರ್ಕಳದ ಪ್ರವೀಣ ಆಳ್ವ ಎಂಬುವವರ ಸೌತ್ ಇಂಡಿಯಾ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ  ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು ಫ್ಯಾಕ್ಟರಿಯಲ್ಲಿ ಗೇರುಬೀಜವನ್ನು ಸಂಸ್ಕರಿಸಿ ಗ್ರೇಡಿಂಗ್ ಮಾಡಿ ಮಾರಾಟ ಮಾಡುತ್ತಿರುವುದಾಗಿದೆ. ಪಿರ್ಯಾದಿದಾರರು ದಿನಾಂಕ 13/10/2020 ರಂದು ಸಂಜೆ 5:30 ಗಂಟೆಗೆ ಫ್ಯಾಕ್ಟರಿ ಕೆಲಸ ಮುಗಿಸಿ ಬೀಗ ಹಾಕಿ, ಬೀಗದ ಕೀ ಯನ್ನು ಫ್ಯಾಕ್ಟರಿ ಕೆಲಸದ ದುದುವಾ ಎಂಬವರಲ್ಲಿ ನೀಡಿ ಮನೆಗೆ ಹೋಗಿದ್ದು, ಮರುದಿನ ದಿನಾಂಕ 14/10/2020 ರಂದು ಬೆಳಿಗ್ಗೆ 07:30 ಗಂಟೆಗೆ ದುದುವಾ ರವರ ಜೊತೆ ಬಂದು ಫ್ಯಾಕ್ಟರಿಯ ಬೀಗ ತೆರೆದು ಕೆಲಸ ಆರಂಭಿಸಿದ್ದು, ಬೆಳಿಗ್ಗೆ 10:30 ಗಂಟೆಗೆ ಹಿಂದಿನ ದಿನ ತೂಕ ಮಾಡಿ ಫ್ಲಾಸ್ಟಿಕ್ ಕ್ರೇಟ್ ನಲ್ಲಿ ಇಟ್ಟಿದ್ದ ಸಂಸ್ಕರಿಸಿದ ಗೇರುಬೀಜವನ್ನು ಲಾರಿಗೆ ಲೋಡ್ ಮಾಡುತ್ತಿರುವಾಗ ಅದರಲ್ಲಿ 125 ಕೆ.ಜಿ ತೂಕದಷ್ಟು ಸಂಸ್ಕರಿಸಿದ ಗೇರುಬೀಜವು ಕಳವಾಗಿದ್ದು ಅದರ ಮೌಲ್ಯ ರೂಪಾಯಿ 75,000/- ಆಗಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2020  ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


ಜಾಹೀರಾತುhttps://www.timesofkarkala.in/2020/10/blog-post_8.html


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget